ಮಕರ ಸಂಕ್ರಮಣಕ್ಕೆ ಭರ್ಜರಿ ಕೊಡುಗೆ ನೀಡಿದ ಟ್ರಾಯ್…!!!

ನಾಗಪುರ:

        ಟ್ರಾಯ್ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದೆ ಎಲ್ಲಾ ಗ್ರಾಹಕರು ತಿಂಗಳಿಗೆ ಕೇವಲ ರೂ. 153 ರೂ. ಪಾವತಿಸಿ 100 ಪೇಯ್ಡ್ ಅಥವಾ ಉಚಿತ ಚಾನೆಲ್ ಗಳನ್ನು ವೀಕ್ಷಿಸಬಹುದೆಂದು ಟ್ರಾಯ್ ಮೂಲಗಳು ತಿಳಿಸಿದೆ.

      ಈ ಹೊಸ ನಿಯಮದಿಂದಾಗಿ ಗ್ರಾಹಕರು ಜಿಎಸ್ ಟಿ ಸೇರಿದಂತೆ  ತಿಂಗಳಿಗೆ ಕೇವಲ 153.40 ರೂ. ಪಾವತಿಸಿ ಪೇಯ್ಡ್ ಅಥವಾ ಉಚಿತ ಚಾನೆಲ್ ಗಳನ್ನು ವೀಕ್ಷಿಸಬಹುದು ಎಂದು ಟ್ರಾಯ್ ಆದೇಶಿಸಿದೆ.ಫೆಬ್ರವರಿ 1 ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದ್ದು, ಜನವರಿ 31 ರೊಳಗೆ ಈ 100 ಚಾನೆಲ್ ಗಳನ್ನು ಗ್ರಾಹಕರು ಆಯ್ಕೆ ಮಾಡಬೇಕಾಗುತ್ತದೆ ಎಂದು ತನ್ನ  ಪ್ರಕಟಣೆಯಲ್ಲಿ ತಿಳಿಸಿದೆ .

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ