300 ಸ್ಥಾನಗಳಿಂದ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ : ಓವೈಸಿ

ಹೈದರಾಬಾದ್:
 
   ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವುದು ಒಂದು ಪ್ರಜಾಪ್ರಭುತ್ವದ ಒಂದು ಸಹಜ ಪ್ರಕ್ರಿಯೇ ಅಷ್ಟೇ ಇದಕ್ಕಾಗಿ ಮುಸ್ಲಿಮರು ಆತಂಕ ಪಡಬೇಕಿಲ್ಲ, ಮಸೀದಿಗಳಿಗೆ ತೆರಳಲು ಮತ್ತು ಪ್ರಾರ್ಥನೆ ಸಲ್ಲಿಸಲು ನಾವು ಸ್ವತಂತ್ರರು ,ನಮ್ಮ  ನಂಬಿಕೆಯನ್ನು ನಾವು ಅನುಸರಿಸುವುದಕ್ಕೆ ಮುಸ್ಲಿಮರಿಗೆ ಸ್ವಾತಂತ್ರ್ಯವಿದೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. 

   ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ್ಯ ಇದೆ. ಮೋದಿ ದೇವಾಲಯಗಳಿಗೆ ಭೇಟಿ ನೀಡಿದರೆ ನಾವು ಮಸೀದಿಗೆ ಭೇಟಿ ನೀಡಬಹುದು, 300 ಸ್ಥಾನಗಳನ್ನು ಗೆದ್ದಿರುವುದು ದೊಡ್ಡದೇನಲ್ಲ, ಏಕೆಂದರೆ ಭಾರತ ಸಂವಿಧಾನ ಇನ್ನೂ ಜೀವಂತವಾಗಿದೆ ಆದ್ದರಿಂದ 300 ಸ್ಥಾನಗಳು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಓವೈಸಿ ಹೇಳಿದ್ದಾರೆ. 

      ಹೈದರಾಬಾದ್ನಿಂದ ಸತತ 4ನೇ  ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ಓವೈಸಿ ಚುನಾವಣೆ ಬಳಿಕ ಹೈದರಾಬಾದ್ ನಲ್ಲಿ ನಡೆದ   ಮುಸ್ಲಿಂ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ಈ ಹೇಳಿಕೆ ನೀಡಿದ್ದಾರೆ. 
         300 ಸ್ಥಾನಗಳನ್ನು ಗೆದ್ದ ಮಾತ್ರಕ್ಕೆ ಬಿಜೆಪಿ ಇಡೀ ಭಾರತವನ್ನು ಆಳಬಹುದು ಎಂದುಕೊಂಡಿದೆ, ಆದರೆ ಅವರ ಕಲ್ಪನೆ ತಪ್ಪು, ನಾನು ಭಾರತಕ್ಕಾಗಿ ಹೋರಾಡುತ್ತೇನೆ, ನಮ್ಮ ಜೊತೆಯಾಗಲು ದಲಿತರಿಗೂ ಕರೆ ನೀಡುತ್ತೇನೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap