ನವದೆಹಲಿ:
ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನ ಬಾಕಿ ಇರುವ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅಮಿತ್ ಶಾ ಹಾಗೂ ವಸುಂಧರಾ ರಾಜೆ ನಡುವೆ ಒಮ್ಮತ ಮೂಡದೇ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.
ಕಳೆದ ತಿಂಗಳು ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಸ್ತಾಪಿಸಿ ವಸುಂಧರಾ ರಾಜೆ ನೀಡಿದ್ದ ಪಟ್ಟಿಯನ್ನು 2 ಬಾರಿ ಅಮಿತ್ ಶಾ ತಿರಸ್ಕರಿಸಿದ್ದರು. ಈಗ ಚುನಾವಣೆಗೆ ತಿಂಗಳಷ್ಟೇ ಬಾಕಿ ಇದ್ದು, ಇವರಿಬ್ಬರ ನಡುವೆ ಶೀತಲ ಸಮರ ಕೊನೆಗಾಣದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೆಶ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಕ್ಷದ ಮೂಲಗಲು ತಿಳಿಸಿವೆ.