ನವದೆಹಲಿ:
ವಾಹನ ತಯಾರಿಕೆ ಜಗತ್ತಿನಲ್ಲಿ ದೈತ್ಯ ಸಂಸ್ಥೆಯಾಗಿ ಬೆಳೆದು ನಿಂತಿರುವ ವೋಕ್ಸ್ ವೇಗಾನ್ ಮೋಟಾರು ಕಂಪೆನಿಯ ಭಾರತ ವಿಭಾಗಕ್ಕೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 100 ಕೋಟಿ ರೂಪಾಯಿಗಳನ್ನು ಈ ಶುಕ್ರವಾರದೊಳಗಾಗಿ ದಂಡ ಪಾವತಿ ಮಾಡಬೇಕು ಎಂದು ನಿದೇರ್ಶನ ನೀಡಿದೆ ಎಂದು ತಿಳಿದು ಬಂದಿದೆ.
ಕಳೆದ ನವೆಂಬರ್ ನಲ್ಲಿ ಮಾಡಿದ ಆದೇಶದ ಅನುಸಾರವಾಗಿ ಕಂಪೆನಿಯ ಮೇಲೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೋರಡಿಸಿತ್ತು ಇದಕ್ಕೆ ತಪ್ಪಿದಲ್ಲಿ ಕಂಪೆನಿಯ ನಿರ್ದೇಶಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








