ಅದಾನಿ ಕಂಪನಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಸಿಬಿಐ..!

ನವದೆಹಲಿ

     ನೆರೆಯ ಆಂಧ್ರಪ್ರದೇಶದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲು ಪೂರೈಸಲು ಕಂಪನಿಗಳ ಆಯ್ಕೆಗೆ ಕರೆದ ಟೆಂಡರ್ ನಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.ಈ ಅಕ್ರಮದ ತನಿಖೆ ನಡೆಸಿದ ಸಿಬಿಐ, ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ನ್ಯಾಷನಲ್ ಕೋ ಅಪರೇಟಿವ್ ಕನ್‌ಸ್ಯೂಮರ್ ಫೆಡರೇಷನ್ (ಎನ್‌ಸಿಸಿಎಫ್) ಮಾಜಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಫ್‌ಐಆರ್ ಹಾಕಿದೆ.

   ಎನ್‌ಸಿಸಿಎಫ್ ಹಾಗೂ ಅದಾನಿ ಸಂಸ್ಥೆ ಮಾಜಿ ಅಧ್ಯಕ್ಷ ವೀರೇಂದ್ರ ಸಿಂಗ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಿ. ಪಿ ಗುಪ್ತಾ, ಮಾಜಿ ಹಿರಿಯ ಸಲಹೆಗಾರ ಎಸ್. ಸಿ ಸಿಂಘಾಲ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಈ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

    ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದು, ಬಿಡ್ಡರ್‌ಗಳ ಆಯ್ಕೆಯ ವಿಧಾನದಲ್ಲಿ ಮಾರ್ಪಾಡು ಮಾಡುವ ಮೂಲಕ ಆರೋಪಿಗಳಿಗೆ ಅನುಕೂಲವಾಗುಂತೆ ನೋಡಿಕೊಳ್ಳಲಾಗಿದೆ.ಅನರ್ಹತೆ ಹೊರತಾಗಿಯೂ ಅಹಮದಾಬಾದ್ ಮೂಲದ ಅದಾನಿ ಸಂಸ್ಥೆಯಿಂದ ಆಮದು ಕಲ್ಲಿದ್ದಲನ್ನು ಆಂಧ್ರಪ್ರದೇಶ ಪವರ್ ಜನರೇಷನ್ ಕಾರ್ಪ್ ಲಿಮಿಟೆಡ್ (ಎಪಿಜಿಇಎನ್‌ಸಿಒ) ಕಂಪನಿಗೆ ಪೂರೈಸಲು ಗುತ್ತಿಗೆ ನೀಡಲಾಗಿದೆ” ಎಂದು ಆರೋಪಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ