ಲಖನೌ:
ಅಕ್ರಮ ಮರಳುಗಾರಿಕೆ ನಡೆಸಿರುವ ಪ್ರಕರಣ ಕುರಿತಂತೆ ಉತ್ತರ ಪ್ರದೇಶದ ಮಾಜಿ ಮಂತ್ರಿ ಗಾಯತ್ರಿ ಪ್ರಜಾಪತಿ ಅವರ ನಿವಾಸ ಸೇರಿದಂತೆ 22 ಕ್ಕೂ ಅಧಿಕ ಸ್ಥಳಗಳಲ್ಲಿ ಸಿಬಿಐ ಇಂದು ಬೆಳಿಗ್ಗೆ ದಾಳಿ ನಡೆಸಿ ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ.
ಈ ವರ್ಷ ಜನವರಿಯಲ್ಲಿ ಅಲಹಬಾದ್ ಹೈಕೋರ್ಟ್ ನೀಡಿದ ನಿರ್ದೇಶನದಂತೆ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.” ಉತ್ತರ ಪ್ರದೇಶ ಮಾಜಿ ಮಂತ್ರಿಗಳಾದ ಪ್ರಜಾಪತಿ ಅವರಿಗೆ ಸೇರಿದೇ ಎನ್ನಲಾದ ಅಮೇಥಿಯ ಮೂರು ವಸತಿ ಸಮುಚ್ಚಯ ಸೇರಿದಂತೆ ಉತ್ತರ ಪ್ರದೇಶದ 22 ಕಡೆಗಳಲ್ಲಿ ನಮ್ಮ ತಂಡಗಳು ಇಂದು ದಾಳಿ ನಡೆಸಿ ತನಿಖೆ ಆರಂಭಿಸಿವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪತಿ ಅವರು ಪ್ರಸ್ತುತ ಅತ್ಯಾಚಾರ ಪ್ರಕರಣವೊಂದರಲ್ಲಿ ಲಕ್ನೋ ಜೈಲಿನಲ್ಲಿದ್ದಾರೆ. ಪ್ರಜಾಪತಿ ಅಲ್ಲದೆ ಹಮೀರ್‌ಪುರದಲ್ಲಿ ವಿಧಾನ ಪರಿಷತ್ ಸದಸ್ಯ ರಮೇಶ್ ಚಂದ್ರ ಮಿಶ್ರಾ ಅವರ ಮನೆ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ .