ಹೈದ್ರಾಬಾದ್
ಕೊರೊನಾ ವೈರಸ್ ನಿಯಂತ್ರಣಕ್ಕೆ ವೈದ್ಯರು ಹಗಲು ಇರುಳು ಶ್ರಮಿಸುತ್ತಿದ್ದಾರೆ. ಇದರ ನಡುವೆ ಹೈದ್ರಾಬಾದ್ ನಲ್ಲಿ ನಡೆದಿರುವ ಒಂದೇ ಒಂದು ಘಟನೆ ಅಲ್ಲಿನ ವೈದ್ಯರ ನಿರ್ಲಕ್ಷ್ಯಕ್ಕೆ ಕೈಗನ್ನಡಿ ಹಿಡಿದಿದೆ.ನೇಪಾಳ ಮೂಲದ ಹಿರಿಯ ವಲಸಿಗನೊಬ್ಬ ಕೊರೊನಾ ವೈರಸ್ ನಿಂದ ನಡುಬೀದಿಯಲ್ಲೇ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು 77 ವರ್ಷದ ಶೇರ್ ಬಹದ್ದೂರ್ ಎಂದು ಗುರುತಿಸಲಾಗಿದೆ.
ಮೃತಪಟ್ಟಿರುವ ವ್ಯಕ್ತಿಯ ಜೇಬಿನಲ್ಲಿ ಕೊರೊನಾ ವೈರಸ್ ತಪಾಸಣೆ ಹಾಗೂ ಸೋಂಕು ತಗಲಿರುವ ಬಗ್ಗೆ ವೈದ್ಯರು ನೀಡಿರುವ ವರದಿಗಳು ಪತ್ತೆಯಾಗಿವೆ. ಪೊಲೀಸರೇ ಮೃತದೇಹವನ್ನು ಪ್ಲಾಸ್ಟಿಕ್ ನಿಂದ ಕಟ್ಟಿ ರಾತ್ರಿಯಿಡೀ ಕಾದಿದ್ದಾರೆ ಎಂದು ತಿಳಿದು ಬಂದಿದೆ .ಹೈದ್ರಾಬಾದ್ ನಲ್ಲಿರುವ ಲಾಲ್ ಪೇಟ್ ಪ್ರದೇಶದಲ್ಲಿ ಇರುವ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಶೇರ್ ಬಹದ್ದೂರ್ ಶುಕ್ರವಾರ ನಡುಬೀದಿಯಲ್ಲೇ ಪ್ರಾಣ ಬಿಟ್ಟಿದ್ದಾರೆ. ನಾರಾಯಣಗುಡ್ ಪ್ರದೇಶದ ವೈಎಂಸಿಎ ಎಕ್ಸ್ ರಸ್ತೆಯಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಪೊಲೀಸರು ವೈದ್ಯಕೀಯ ಸಿಬ್ಬಂದಿಯ ಆಗಮನಕ್ಕಾಗಿ ಎದುರು ನೋಡುತ್ತಿದ್ದರು. ಆದರೆ ವೈದ್ಯಕೀಯ ಸಿಬ್ಬಂದಿ 12 ಗಂಟೆಗಳ ನಂತರ ಅಂದರೆ ಮರುದಿನ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ