ನವದೆಹಲಿ:
ಪಾಕಿಸ್ತಾನವನ್ನು ಪರೋಕ್ಷವಾಗಿ ಬೆಂಬಲಿಸಿ ಮಾತನಾಡುವ ಬ್ರಿಟನ್ ಸಂಸದೆ ಡೆಬ್ಬಿ ಅಬ್ರಹಾಮ್ಸ್ ಅವರಿಗೆ ವೀಸಾ ನಿರಾಕರಿಸಿರುವುದನ್ನು ಕಾಂಗ್ರೆಸ್ ಹಿರಿಯ ನಾಯಕ ಹಾಗು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಬೆಂಬಲಿಸಿದ್ದಾರೆ.
ಡೆಬ್ಬಿ ಅಬ್ರಹಾಮ್ಸ್ ಕೇವಲ ಸಂಸದೆಯಾಗಿ ವ್ಯವಹರಿಸದೆ ಪಾಕಿಸ್ಥಾನ ಗೂಢಾಚಾರಿಣಿಯ ರೀತಿ ವರ್ತಿಸುತ್ತಿದ್ದಾರಲ್ಲದೇ ಅವರು ಪಾಕಿಸ್ತಾನದ ಇ-ಆಡಳಿತ ಮತ್ತು ಐಎಸ್ಐನೊಂದಿಗೆ ಉತ್ತಮ ನಂಟು ಹೊಂದಿದ್ದಾರೆ ಎನ್ನಲಾಗಿದೆ. ಡೆಬ್ಬಿ ಅವರಿಗೆ ಭಾರತ ಪ್ರವೇಶ ನಿರಾಕರಣೆ ಸಮಂಜಸವಾಗಿದೆ ಎಂದು ಸಿಂಘ್ವಿ ಅಭಿಪ್ರಾಯ ಪಟ್ಟಿದ್ದಾರೆ.
ಭಾರತದ ಸಾರ್ವಭೌಮತ್ವದ ಮೇಲೆ ದಾಳಿ ನಡೆಸುವ ಪ್ರತಿಯೊಂದು ಯತ್ನಗಳನ್ನು ವಿಫಲಗೊಳಿಸಬೇಕು ಎಂದು ಸಿಂಘ್ವಿ ಟ್ವೀಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರನ್ನು ಡೆಬ್ಬಿಯವರು ಟೀಕಿಸಿದ್ದರು. ದುಬೈನಿಂದ ಭಾರತಕ್ಕೆ ಬಂದಿದ್ದ ಅಬ್ರಹಾಮ್ಸ್ ಅವರಿಗೆ ಭಾರತ ಪ್ರವೇಶವನ್ನು ನಿರಾಕರಿಸಲಾಗಿತ್ತು ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ