ಬೆಂಗಳೂರು
ಇಸ್ರೋ, ಭಾರತದ ಬಾಹ್ಯಾಕಾಶ ಸಂಸ್ಥೆ ಚಂದ್ರಯಾನ್- II ಉಡಾವಣೆಯಿಂದ ಚಂದ್ರನ ಅನ್ವೇಶಣೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು.
ಉಡಾವಣೆಯ ಎರಡು ದಿನಗಳ ಮೊದಲು, ಎಲ್ಲಾ ಇಸ್ರೋ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಸರ್ಕಾರದಿಂದ ಸಿಗುತ್ತಿದ್ದ ಪ್ರೋತ್ಸಾಹಧನ ಇನ್ನುಮುಂದೆ ನೀಡಲಾಗುವುದಿಲ್ಲ ಎಂದು ನೋಟಿಸ್ ಮೂಲಕ ತಿಳಿಸಿದೆ.
ಇಂದು ಕೇಂದ್ರ ಹೊರಡಿಸಿದ ಆದೇಶದ ಪ್ರಕಾರ ಈ ಹಿಂದೆ ವಿಜ್ಞಾನಿಗಳು ಮತ್ತು ಇಂಜಿನಿಯರ್ ಗಳಿಗೆ ನೀಡುತ್ತಿದ್ದ ಅನುದಾನವನ್ನು ನಿಲ್ಲಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
1996 ರಿಂದ ಇಸ್ರೋದಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಉಳಿಸಿಕೊಳ್ಳಲು ಮತ್ತು ಆಕರ್ಷಿಸಲು ಸರ್ಕಾರವು ಎರಡು ಹೆಚ್ಚುವರಿ ಏರಿಕೆಗಳ ರೂಪದಲ್ಲಿ ಈ ಪ್ರೋತ್ಸಾಹಧನವನ್ನು(ಇನ್ ಸೆಂಟೀವ್) ಪರಿಚಯಿಸಿತು.ಈ ಆದೇಶದ ನಂತರ, ಡಿ, ಇ, ಎಫ್ ಮತ್ತು ಜಿ ವಿಜ್ಞಾನಿಗಳು ಈ ಸೌಲಭ್ಯವನ್ನು ಇನ್ನು ಮುಂದೆ ಪಡೆಯುವಂತಿಲ್ಲ ಎಂದು ತಿಳಿಸಿದೆ.
ವರದಿಗಳ ಪ್ರಕಾರ, ಸುಮಾರು 80 ರಿಂದ 90% ಉದ್ಯೋಗಿಗಳು ಸಂಬಳದಲ್ಲಿ ಸುಮಾರು 8-10,000 ರೂ.ಗಳ ಕಡಿತವಾಗಲಿದೆ ಎಂದು ಕೇಂದ್ರ ಆರ್ಥಿಕ ಇಲಾಖೆ ತಿಳಿಸಿದೆ.