ಕೇಂದ್ರ ಸರ್ಕಾರದಿಂದ ಅಸಮಪರ್ಕವಾದ ಆರ್ಥಿಕ ಪ್ಯಾಕೇಜ್ ಘೋಷಣೆ…!

ನವದೆಹಲಿ:

     ಕೊವಿಡ್-19 ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್ ಅಸಮರ್ಕವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಅವರು ಆರೋಪಿಸಿದ್ದಾರೆ.ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಕೇವಲ 1.86 ಕೋಟಿ ರೂಪಾಯಿ, ಅಂದರೆ ದೇಶದ ಜಿಡಿಪಿಯ ಶೇ. 0.91ರಷ್ಟು ಘೋಷಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ದೂರಿದ್ದಾರೆ.

      ದೇಶದ ಜಿಡಿಪಿಯ ಶೇಕಡಾ 10 ರಷ್ಟು ಪರಿಷ್ಕೃತ ಮತ್ತು ಸಮಗ್ರ ಪ್ಯಾಕೇಜ್ ಅನ್ನು ಘೋಷಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.ಬಡವರು, ವಲಸಿಗರು, ರೈತರು, ಕಾರ್ಮಿಕರು,ಸಣ್ಣ ಅಂಗಡಿಯವರು ಮತ್ತು ಮಧ್ಯಮ ವರ್ಗದವರು ಸೇರಿದಂತೆ ವರ್ಗದವನ್ನು ಉತ್ತೇಜನ ಪ್ಯಾಕೇಜ್ ನಿಂದ ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

 

      ಕೇಂದ್ರ ಸರ್ಕಾರದ ಆರ್ಥಿಕ ಪ್ಯಾಕೇಜ್ ಗೆ ಸಂಬಂಧಿಸಿದಂತೆ “ನಾವು ನಮ್ಮ ಸಂಪೂರ್ಣ ನಿರಾಶೆಯನ್ನು ವ್ಯಕ್ತಪಡಿಸುತ್ತೇವೆ ಮತ್ತು ಪ್ಯಾಕೇಜ್ ಅನ್ನು ಮರುಪರಿಶೀಲಿಸುವಂತೆ ಮತ್ತು ಜಿಡಿಪಿಯ ಶೇಕಡಾ 10 ಕ್ಕೆ ಸಮನಾದ 10 ಲಕ್ಷ ಕೋಟಿ ರೂ.ಗಿಂತ ಕಡಿಮೆಯಿಲ್ಲದ ನಿಜವಾದ ಹೆಚ್ಚುವರಿ ಖರ್ಚಿನ ಪರಿಷ್ಕೃತ ಮತ್ತು ಸಮಗ್ರ ಆರ್ಥಿಕ ಉತ್ತೇಜನ ಪ್ಯಾಕೇಜ್ ಅನ್ನು ಘೋಷಿಸುವಂತೆ ಸರ್ಕಾರವನ್ನು ವಿನಂತಿಸುತ್ತೇವೆ” ಎಂದು ಚಿದಂಬರಂ ಅವರು ವಿಡಿಯೋ ಕಾನ್ಫೆರೆನ್ಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap