ರೆಡ್ ಝೋನ್ : ಕೇಂದ್ರದಿಂದ ತಪ್ಪು ಮೌಲ್ಯ ಮಾಪನ : ಮಮತಾ ಬ್ಯಾನರ್ಜಿ

ಕೋಲ್ಕತಾ:

      ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿರುವ ರೆಡ್ ಝೋನ್ ಗಳ ಪಟ್ಟಿಯಲ್ಲಿ ನಮ್ಮ ರಾಜ್ಯದ 10 ಜಿಲ್ಲೆಗಳನ್ನು ಸೇರಿಸಿದ್ದು ,ಇದು ಕೇಂದ್ರ ಸರ್ಕಾರ ನಡೆಸಿರುವ ತಪ್ಪು ಮೌಲ್ಯಮಾಪನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

     ಈ ಸಂಬಂಧ ಕೇಂದ್ರ ಆರೋಗ್ಯ ಇಲಾಖೆಗೆ ಪತ್ರ ಬರೆದಿರುವ ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆ, ಕೇಂದ್ರದ ಮಾರ್ಗಸೂಚಿಯ ಪ್ರಕಾರ ರಾಜ್ಯದ ನಾಲ್ಕು ಜಿಲ್ಲೆಗಳನ್ನು ಮಾತ್ರ ರೆಡೆ ಜೋನ್ ಗೆ ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ರಾಜ್ಯದ ರೆಡ್ ಜೋನ್, ಅರೆಂಜ್ ಜೋನ್ ಮತ್ತು ಗ್ರೀನ್ ಜೋನ್ ಜಿಲ್ಲೆಗಳ ಪಟ್ಟಿಯನ್ನು ಪತ್ರದ ಜೊತೆ ಲಗತ್ತಿಸಲಾಗಿದೆ. ಜಿಲ್ಲಾವಾರು ಕೊರೋನಾ ವೈರಸ್ ಪ್ರಕರಣಗಳನ್ನು ಮತ್ತು ಹೊಸದಾಗಿ ಪತ್ತೆಯಾದ ಪ್ರಕರಣಗಳ ಮಾಹಿತಿಯನ್ನು ನೀಡಲಾಗಿದೆ.

    ಕೇಂದ್ರ ಸರ್ಕಾರ ಲಾಕ್ ಡೌನ್ ಅನ್ನು ಮೇ 17ರ ವರೆಗೆ ವಿಸ್ತರಿಸಿದ್ದು, ಅದಕ್ಕೂ ಮುನ್ನ ದೇಶವ್ಯಾಪಿ ಕೊರೋನಾ ಸೋಂಕು ಅಪಾಯಕಾರಿ ಮಟ್ಟದಲ್ಲಿರುವ ಪ್ರದೇಶಗಳನ್ನು ಗುರುತಿಸಿ, ರೆಡ್, ಅರೆಂಜ್ ಮತ್ತು ಗ್ರೀನ್ ಜೋನ್ ಎಂದು ವರ್ಗೀಕರಿಸಿದೆ. ಅಲ್ಲದೆ ಅರೆಂಜ್ ಮತ್ತು ಗ್ರೀನ್ ಜೋನ್ ಗಳಿಗೆ ಲಾಕ್ ಡೌನ್ ನಿಂದ ಕೆಲವು ವಿನಾಯ್ತಿಗಳನ್ನು ನೀಡಿದ್ದು, ಈ ರೆಡ್ ಝೋನ್ ಪಟ್ಟಿಗಳಲ್ಲಿ ಲೋಪದೋಷಗಳಿರುವುದು ಸ್ಪಷ್ಠವಾಗಿ ಗೋಚರಿಸುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap