ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಏರಿಕೆ..!

ನವದೆಹಲಿ:

     ಜಾಗತಿಕವಾಗಿ ತೀರಾ ಚರ್ಚೆಗೆ ಗ್ರಾಸವಾಗಿರುವ ಕೊರೊನಾ ಸೋಕಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ಅಕ್ಷರಶಃ ನೆಲಕಚ್ಚಿದೆ ಹೀಗಿರುವಾಗ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಗೆ ಮಾಡಿ ಕೇಂದ್ರ ಸರ್ಕಾರ ಆದೇಶ ನೀಡಿದೆ. 

      ಪ್ರತಿ ಲೀಟರ್‌ಗೆ ಮೂರು 3ರೂ. ಅಬಕಾರಿ ಸುಂಕ ಹೆಚ್ಚಿಸಲಾಗಿದೆ ತಿಳಿಸಿದೆ. ಅದೇ ರೀತಿ ಪೆಟ್ರೋಲ್ ಮೇಲೆ ಪ್ರತ್ಯೇಕವಾಗಿ ಅಬಕಾರಿ ಸುಂಕ ವನ್ನು 2 ರೂ ನಿಂದ 8 ರೂ ಮತ್ತು ಡೀಸೆಲ್ ಮೇಲೆ 4 ರೂ.ಗೆ ಹೆಚ್ಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

     ರಸ್ತೆ ಸೆಸ್ ಕೂಡ ಹೆಚ್ಚಿಸಲಾಗಿದ್ದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 1ರೂ ಹಾಗೂ ರೂ. 10 ಹೆಚ್ಚಿಸಲಾಗಿದೆ.ಅಂತರರಾಷ್ಟ್ರೀಯ ತೈಲ ಬೆಲೆಗಳ ಇಳಿಮುಖ ಕಂಡ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. 

    ದೇಶದ ಆರ್ಥಿಕತೆ ಮಂದಗತಿಯಿಂದ ಹೆಣಗಾಡುತ್ತಿರುವ ನಡುವೆಯೇ ಕೊರೋನಾ ವೈರಸ್ ಪ್ರಭಾವದಿಂದ ಮತ್ತಷ್ಟು ಹದಗೆಡುವ ಸಾಧ್ಯತೆಯ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವುದರೊಂದಿಗೆ, ಇಂಧನ ಬೆಲೆಗಳು ಸ್ವಲ್ಪಮಟ್ಟಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ 2000 ಕೋಟಿ ಹೆಚ್ಚುವರಿ ಆದಾಯ ಬರಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap