ಕೇಂದ್ರದಿಂದ ಒಡೆದು ಆಳುವ ನೀತಿ : ಮಮತಾ ಬ್ಯಾನರ್ಜಿ

ಕೋಲ್ಕತಾ:

      ಕೇಂದ್ರ ಸರ್ಕಾರ ಒಡೆದು ಆಳುವ ನೀತಿ ನಮ್ಮ ರಾಜ್ಯದಲ್ಲಿ ನಡೆಯುವುದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.ಸ್ವಚ್ಛ ಭಾರತ ಅಭಿಯಾನದ ನಿಮಿತ್ತ ಇಂದು ಕೋಲ್ಕತಾದಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಮತಾ ಬ್ಯಾನರ್ಜೀ ಅವರು ಮತಕ್ಕಾಗಿ ನುಸುಳುಕೋರರನ್ನು ರಾಜ್ಯದಲ್ಲಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.ನಮ್ಮ ರಾಜ್ಯದ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತು ಯತ್ನಗಳನ್ನು ನಿಲ್ಲಿಸಿ ಎಂದು ಶಾ ಅವರಿಗೆ ತಿರುಗೇಟು ನೀಡಿದ್ದಾರೆ. 

     ‘ಎಲ್ಲರನ್ನು ನಾವು ನಮ್ಮ ರಾಜ್ಯಕ್ಕೆ ಸ್ವಾಗತಿಸುತ್ತೇವೆ ಮತ್ತು ಅವರಿಗೆ ನಮ್ಮ ಆತಿಥ್ಯ ನೀಡಿ ಎಲ್ಲರೂ ಆನಂದಿಸುತ್ತೇವೆ.ಆದರೆ  ದಯವಿಟ್ಟು ಧರ್ಮದ ಆಧಾರದ ಮೇಲೆ ರಾಜಕೀಯ ವಿಭಜನೆ ಮಾಡಬೇಡಿ,ನಿಮ್ಮ ಈ ನಡೆಯಿಂದ ಬಿರುಕು ಮೂಡಿಸಲು ಪ್ರಯತ್ನಿ ಸಬೇಡಿ, ಬಂಗಾಳವು ಹಲವಾರು ಧರ್ಮಗಳ ನಾಯಕರನ್ನು ಗೌರವಿಸುತ್ತ ಬಂದಿದೆ, ಇದನ್ನು ಎಂದಿಗೂ ಯಾರೂ ನಾಶಮಾಡಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜೀ ತಿಳಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link