ನವದೆಹಲಿ
ಭಾರತೀಯ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪ್‌ನಲ್ಲಿನ (ಐಆರ್‌ಸಿಟಿಸಿ) ಶೇಕಡಾ 15ರಿಂದ 20ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಕಳೆದ ತಿಂಗಳು, ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (ಡಿಐಪಿಎಎಂ) ಐಆರ್‌ಸಿಟಿಸಿ ಎನ್‌ಎಸ್‌ಇ ಶೇಕಡಾ 2.95ರಷ್ಟು ಮಾರಾಟವನ್ನು ನಿರ್ವಹಿಸಲು ಸೆಪ್ಟೆಂಬರ್ 10 ರೊಳಗೆ ವ್ಯಾಪಾರಿ ಬ್ಯಾಂಕರ್‌ಗಳಿಂದ ಬಿಡ್‌ಗಳನ್ನು ಆಹ್ವಾನಿಸಿತ್ತು.
ಆರ್‌ಸಿಟಿಸಿಯಲ್ಲಿ ಕೇಂದ್ರವು ಈಗ ಶೇಕಡಾ 87.40ರಷ್ಟು ಷೇರುಗಳನ್ನು ಹೊಂದಿದೆ. ಸೆಬಿ ರೂಪಿಸಿರುವ ಸಾರ್ವಜನಿಕರು ಹೊಂದಿರಬೇಕಾದ ಪಾಲಿಗೆ ಸಂಬಂಧಿಸಿದ ನಿಯಮ ಪಾಲಿಸಬೇಕು ಎಂದಾದಲ್ಲಿ ಸರ್ಕಾರವು ತನ್ನ ಪಾಲನ್ನು ಶೇ. 75ರಷ್ಟಕ್ಕೆ ತಗ್ಗಿಸಬೇಕಿದೆ.
ಭಾರತೀಯ ರೈಲ್ವೆಯಲ್ಲಿ ಆಹಾರ ಪೂರೈಕೆ ಸೇವೆ, ಆನ್‌ಲೈನ್ ಮೂಲಕ ರೈಲ್ವೆ ಟಿಕೆಟ್ ಕಾಯ್ದಿರಿಸುವ ಸೇವೆ ಹಾಗೂ ರೈಲು ನಿಲ್ದಾಣಗಳಲ್ಲಿ ಪ್ಯಾಕ್ ಮಾಡಿದ ಕುಡಿಯುವ ನೀರಿನ ಪೂರೈಕೆಯ ಹೊಣೆಯನ್ನು ಐಆರ್‌ಸಿಟಿಸಿಗೆ ನೀಡಲಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ