ಕೇಂದ್ರ ಸರ್ಕಾರದಿಂದ ಕುರ್ಚಿ ರಾಜಕೀಯ : ಸಂಜಯ್ ರಾವತ್

ನವದೆಹಲಿ:

      ರಾಜ್ಯಸಭೆಯಲ್ಲಿ ತಮ್ಮ ಆಸನವನ್ನು ಬದಲಾಯಿಸುವ ಮೂಲಕ ನನ್ನನ್ನು “ಅವಮಾನಿಸುವ” ಮತ್ತು “ಉದ್ದೇಶಪೂರ್ವಕ ವಾಗಿ ನನ್ನ ಭಾವನೆಗಳಿಗೆ ನೋವುಂಟು ಮಾಡುವ ಮೂಲಕ ನನ್ನ ಧ್ವನಿಯನ್ನು ಅಡಗಿಸುವ ಹುನ್ನಾರ ನಡೆದಿದೆ ” ಎಂದು ಶಿವಸೇನೆಯ ಸಂಜಯ್ ರೌತ್ ಉಪ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

    ಮಹಾರಾಷ್ಟ್ರದ ಅಧಿಕಾರ ಹಿಡಿಯುವಲ್ಲಿ ಸೋತ ನಂತರ  ಆಡಳಿತಾರೂಢ ಬಿಜೆಪಿ ಕುರ್ಚಿ ರಾಜಕೀಯ ಮಾಡುತ್ತಿದೆ  ಸಂಸತ್ತಿನಲ್ಲಿ ಶಿವಸೇನೆ ಸಂಸದರ ಸ್ಥಾನಗಳನ್ನು ಬದಲಾಯಿಸುವ ಮೂಲಕ ದ್ವೇಶದ ರಾಜಕೀಯ ಮಾಡುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.

   “ರಾಜ್ಯಸಭೆಯಲ್ಲಿ ತಮ್ಮ ಆಸನವನ್ನು 3ನೇ ಸಾಲಿನಿಂದ 5 ನೇ ಸಾಲಿಗೆ ಬದಲಾಯಿಸಲಾಗಿದೆ ಎಂದು ತಿಳಿದು ನಾನು ಆಶ್ಚರ್ಯಚಕಿತನಾದನು. ಶಿವಸೇನಾ ನಾಯಕರ ಭಾವನೆಗಳನ್ನು ನೋಯಿಸಲು ಮತ್ತು ನಮ್ಮ ಧ್ವನಿಯನ್ನು ಹತ್ತಿಕ್ಕಲು ಈ ನಿರ್ಧಾರವನ್ನು ಉದ್ದೇಶಪೂರ್ವಕವಾಗಿ ತೆಗೆದುಕೊಂಡಿದ್ದಾರೆ” ಎಂದು ಸಂಜಯ್ ರೌತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 “ಎನ್‌ಡಿಎ ಪಕ್ಷಗಳ ಒಕ್ಕೂಟದಿಂದ ತೆಗೆದುಹಾಕುವ ಬಗ್ಗೆ ಯಾವುದೇ ಔಪಚಾರಿಕ ಪ್ರಕಟಣೆ ಇಲ್ಲದಿರುವುದರಿಂದ ಈ ಸ್ಥಾನಗಳನ್ನು ಮರುಹಂಚಿಕೆಯ ಕಾರಣವೇನು ಎಂದು ನಮಗೆ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ” ಎಂದು ರಾಜ್ಯಸಭೆಯ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap