ಸ್ಯಾನಿಟೈಸರ್ ಮೇಲೆ ಜಿ ಎಸ್ ಟಿ ಪ್ರಯೋಗಕ್ಕೆ ಮುಂದಾದ ಸರ್ಕಾರ..!

ನವದೆಹಲಿ:

     ರಾಷ್ಟ್ರಾದ್ಯಂತ ಕೊರೋನಾ ಹಾವಳಿ ಹೆಚ್ಚಾಗಿರವ ಬೆನ್ನಲೆ ಗ್ರಾಹಕರ ಮೇಲೆ ಕೇಂದ್ರ ಸರ್ಕಾರ ಜಿ ಎಸ್ ಟಿ ಬರೆ ಎಳೆದಿದೆ ,ಮಾಸ್ಕ್​ಗಳ ಜತೆಗೆ ಆಲ್ಕೋಹಾಲ್​ ಆಧಾರಿತವಾದ ಹ್ಯಾಂಡ್​ ಸ್ಯಾನಿಟೈಸರ್​ಗಳಿಗೂ ಭಾರಿ ಬೇಡಿಕೆ ಬಂದಿರುವುದರಿಂದ  ಆಲ್ಕೋಹಾಲ್​ ಆಧಾರಿತ ಹ್ಯಾಂಡ್​ ಸ್ಯಾನಿಟೈಸರ್​ಗಳ ಮೇಲೆ ಶೇ.18 ಜಿಎಸ್​ಟಿ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಮಾರ್ಚ್​ನಲ್ಲಿ ಮೊದಲ ಬಾರಿಗೆ ಕೋವಿಡ್​ ಲಾಕ್​ಡೌನ್​ ಜಾರಿಗೊಳಿಸಿದ್ದ ಸಂದರ್ಭದಲ್ಲಿ ಇದು ಅಗತ್ಯವಸ್ತುಗಳ ಪಟ್ಟಿಯಲ್ಲಿತ್ತು. ಆದರೆ ಈಗ ಆಲ್ಕೋಹಾಲ್​ ಆಧಾರಿತ ಹ್ಯಾಂಡ್​ ಸ್ಯಾನಿಟೈಸರ್​ಗಳ ದಾಸ್ತಾನು ಸಾಕಷ್ಟು ಇದ್ದು, ಮಾರುಕಟ್ಟೆಯಲ್ಲಿ ಲಭ್ಯತೆಗೆ ಯಾವುದೇ ಅಡ್ಡಿಯಿಲ್ಲ ಎಂಬ ಕಾರಣಕ್ಕೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಇದನ್ನು ಅಗತ್ಯವಸ್ತುಗಳ ಪಟ್ಟಿಯಿಂದ ಕೈಬಿಟ್ಟಿದೆ.

    ಆದರೆ, ಹ್ಯಾಂಡ್​ಸ್ಯಾನಿಟೈಸರ್​ಗಳು ಯಾವ ವರ್ಗಕ್ಕೆ ಬರುತ್ತವೆ, ಅದಕ್ಕೆ ವಿಧಿಸುವ ಜಿಎಸ್​ಟಿ ಎಷ್ಟು ಎಂಬ ಕುರಿತ ಅನುಮಾನ ಬಗೆಹರಿಸಿಕೊಳ್ಳಲು ಗೋವಾ ಮೂಲದ ಹ್ಯಾಂಡ್​ಸ್ಯಾನಿಟೈಸರ್​ ಉತ್ಪಾದನಾ ಕಂಪನಿಯೊಂದು ಮುಂಗಡ ಆದೇಶ ಪ್ರಾಧಿಕಾರದ (ಆಥಾರಿಟಿ ಫಾರ್​ ಅಡ್ವಾನ್ಸ್​ ರೂಲಿಂಗ್​-ಎಎಆರ್​) ಗೋವಾ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು.

    ಇದೀಗ ಈ ಅರ್ಜಿಯನ್ನು ಇತ್ಯರ್ಥಪಡಿಸಿರುವ ಎಎಆರ್​, ಸ್ಯಾನಿಟೈಸರ್​ಗಳು ಆಲ್ಕೋಹಾಲ್​ ಆಧಾರಿತ ಹ್ಯಾಂಡ್​ ಸ್ಯಾನಿಟೈಸರ್​ ಎಂಬ ವರ್ಗಕ್ಕೆ ಸೇರುತ್ತವೆ. ಇದನ್ನು ಶೀರ್ಷಿಕೆ ಎಚ್​ಎಸ್​ನ 3808ರಡಿ ಇರಿಸಲಾಗಿದೆ. ಇದರ ಪ್ರಕಾರ ಇದು ಶೇ.18 ಜಿಎಸ್​ಟಿ ವ್ಯಾಪ್ತಿಗೆ ಒಳಪಡುತ್ತದೆ. ಆದ್ದರಿಂದ, ಆಲ್ಕೋಹಾಲ್​ ಆಧಾರಿತ ಸ್ಯಾನಿಟೈಸರ್​ಗಳ ಮೇಲೆ ಶೇ.18 ಜಿಎಸ್​ಟಿ ವಿಧಿಸಬಹುದಾಗಿದೆ ಎಂದು ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap