ಶ್ರೀಹರಿಕೋಟಾ
ಇಸ್ರೋದ ಹೆಮ್ಮೆಯ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 2ನ್ನು ಯಶಸ್ವಿ ಉಡಾವಣೆ ಮಾಡುವ ಮೂಲಕ ಹೊಸ ಇತಿಹಾಸ ಬರೆದಿದೆ. ಶ್ರೀಹರಿಕೋಟದಲ್ಲಿ ಸಾವಿರಾರು ಮಂದಿ ಸಾಕ್ಷಿಯಾದರು.ಇಸ್ರೋ ವಿಜ್ಞಾನಿಗಳು ಹೇಳಿದಂತೆ ಪ್ರತಿಷ್ಠಿತ ಚಂದ್ರಯಾನ-2 ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ .ಇನ್ನು ನಭೋ ಮಂಡಲದತ್ತ ಪ್ರಯಾಣ ಆರಂಭಿಸಿದ ಬಾಹುಬಲಿಯೂ ಇನ್ನು 48 ದಿನಗಳಲ್ಲಿ ಚಂದ್ರನ ಮೇಲೆ ಕಾಲಿಡಲಿದೆ. ಸೆಪ್ಸೆಂಬರ್ 6 ಅಥವಾ 7ರಂದು ಚಂದ್ರನ ದಕ್ಷಿಣ ಭಾಗವನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಮದು ತಿಳಿಸಿದ್ದಾರೆ.
ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-2’ ಯೋಜನೆ ಇಂದು ಸಾಕಾರಗೊಂಡಿದೆ.ಇಂದು ಮಧ್ಯಾಹ್ನ 2.43 ವೇಳೆಗೆ ಚಂದ್ರಯಾನ-2ದ ಉಡಾವಣಯಾಗಿದ್ದು.ಚಂದ್ರಯಾನ-2 ಯೋಜನೆಯ ಉಡಾವಣೆ ಜುಲೈ 15ರಂದೇ ನಡೆಯಬೇಕಿತ್ತು. ಅಂದು ಮಧ್ಯರಾತ್ರಿ 2.51 ನಿಮಿಷಕ್ಕೆ ಸರಿಯಾಗಿ ಉಡಾವಣೆಗೊಳ್ಳಬೇಕಿತ್ತು.ಆದರೆ, ಅದಕ್ಕೂ 56 ನಿಮಿಷ 24 ಸೆಕೆಂಡ್ ಮುನ್ನವಷ್ಟೇ ತಾಂತ್ರಿಕ ಕಾರಣಗಳಿಂದ ಚಂದ್ರಯಾನದ ಉಡಾವಣೆ ಮುಂದೂಡಲಾಗಿದೆ ಎಂದು ಇಸ್ರೋ ಘೋಷಿಸಿತ್ತು.ಮತ್ತು ಇಸ್ರೋ ಹೇಳಿದ ಪ್ರಕಾರ ಇಂದು ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ರಾಕೆಟ್ ಅನ್ನು ಉಡಾಯಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








