ನವದೆಹಲಿ:

ಪುಲ್ವಾಮಾ ದಾಳಿಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದ್ದು ಅದನ್ನು ಗಂಭೀರವಾಗಿ ಪರಿಗಣಿಸಿ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡುತ್ತಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲ ಆರೋಪಿಸಿದ್ದಾರೆ.
ಇಂದು ಬೆಳಿಗ್ಗೆ ದೆಹಲಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂದೀಪ್ ಇಡೀ ದೇಶವೇ ಭಯೋತ್ಪಾದನೆ ದಾಳಿಗೆ ತತ್ತರಿಸಿ ಹೋಗಿರುವಾಗ ಪ್ರಧಾನಿ ನರೇಂದ್ರ ಮೋದಿ ಮಾತ್ರ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ತಮ್ಮ ಸರ್ಕಾರದ ಪ್ರಚಾರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಕಿಡಿಕಾರಿದ್ದಾರೆ.
ಪುಲ್ವಾಮಾದಲ್ಲಿ ಯೋಧರ ಸಾವಿನಿಂದ ಇಡೀ ದೇಶ ದುಃಖಗೊಂಡಿದ್ದರೆ ನಾನು ದೇಶದ ಚೌಕಿದಾರ ಎಂದು ಹೇಳುವ ಪ್ರಧಾನಿಯವರು ಮಾತ್ರ ಇವಾವುದರ ಪರಿವೆ ಇಲ್ಲದೇ ನಿನ್ನೆ ಬೆಳಗ್ಗಿನಿಂದ ಸಾಯಂಕಾಲದ ವರೆಗೂ ಪಾರ್ಕ್ ನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಇಂತಹ ಪ್ರಧಾನಿಯನ್ನು ಜಗತ್ತಿನಲ್ಲಿ ಎಲ್ಲಾದರೂ ನೋಡಿದ್ದೀರಾ? ಇದಕ್ಕೆ ಏನು ಹೇಳಬೇಕೊ ಗೊತ್ತಾಗುತ್ತಿಲ್ಲ ಎಂದು ಆರೋಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
