ಐ ಪಿ ಎಲ್ ಚೊಚ್ಚಲ ಪಂದ್ಯ : ಚೆನೈಗೆ ಭರ್ಜರಿ ಗೆಲುವು

ಚೆನ್ನೈ

       ಐಪಿಎಲ್ 2019ರ ಮೊದಲನೇ ಪಂದ್ಯದಲ್ಲಿ ರಾಯಲ್‍ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈಸೂಪರ್ ಕಿಂಗ್ಸ್ ನಡುವೆ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಆರ್‍ಸಿಬಿ ತಂಡವು 70ರನ್‍ಗಳನ್ನು ಪೇರಿಸಿ ಆಲ್‍ಔಟ್ ಆಗಿದ್ದರು. 71ರನ್‍ಗಳ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್‍ಕಿಂಗ್ಸ್ ತಂಡವು ಮೂರು ವಿಕೆಟ್‍ಗಳ ನಷ್ಟಕ್ಕೆ 18ನೇ ಓವರ್‍ಗೆ ಗೆಲುವು ದೊರೆಯಿತು.

       ಐಪಿಎಲ್ ಪಂದ್ಯಾವಳಿ ಆರಂಭವಾಗಿದ್ದು, ಮೊದಲ ಪಂದ್ಯವಾಡಿದ ರಾಯಲ್ ಚಾಲೆಂಜರ್ಸ್ ಮತ್ತು ಚೆನ್ನೈ ತಂಡಗಳಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ತಂಡವು ಮೊದಲ ಅರ್ಧ ಗಂಟೆಯ ಹೊತ್ತಿನಲ್ಲೇ ಆರ್‍ಸಿಬಿ ತಂಡದ ನಾಲ್ಕು ವಿಕೆಟ್‍ಗಳನ್ನು ಕಬಳಿಸಿತು. ನಂತರ ಬಹುಬೇಗನೇ ಆರ್‍ಸಿಬಿ ಆಟಗಾರರು ಒಬ್ಬರಾದ ಮೇಲೆ ಒಬ್ಬರು ಔಟ್ ಆಗಿದ್ದು, ಅತಿ ಕಡಿಮೆ ರನ್‍ಗಳಲ್ಲಿ ಮೊದಲನೇ ಆಟ ಮುಕ್ತಾಯಗೊಂಡಿತು.

      ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‍ಸಿಬಿ ತಂಡದ ನಾಯಕ ವಿರಾಟ್‍ಕೊಹ್ಲಿ ಮತ್ತು ಪಾರ್ಥಿವ್ ಪಟೇಲ್ ಜೋಡಿ ಆಟ 6 ರನ್‍ಗಳಿಗೆ ಕೊನೆಗೊಂಡಿತು. 12 ಬಾಲ್‍ಗಳಲ್ಲಿ 6 ರನ್ ಗಳಿಸಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಎದುರುದಾರರನಿಗೆ ಕ್ಯಾಚ್ ನೀಡುವ ಮೂಲಕ ಔಟ್ ಆದರು. ನಂತರ ಗ್ರೌಂಡ್‍ಗೆ ಬಂದ ಮೊಯಿನ್ ಅಲಿ 6 ಬಾಲ್‍ಗಳಲ್ಲಿ 9 ರನ್ ಗಳಿಸಿ ಔಟ್ ಆದರು. ಕ್ರೀಸ್ ಗೆ ಬಂದ ಎಬಿ ಡೆವಿಲಿಯರ್ಸ್ 9 ರನ್‍ಗಳಿಗೆ ಹೊರಬಂದರು.

       ಶಿಮ್ರೋನ್ ಹತ್ಮ್ಯೇರ್ ಯಾವುದೇ ರನ್ ಗಳಿಲ್ಲದೆ ರನ್‍ಔಟ್ ಆದರು. ಕ್ರೀಸ್‍ಗೆ ಬಂದ ಶಿವಂದುಬೆ 5 ಬಾಲ್‍ಗಳಲ್ಲಿ 2 ರನ್ ನೀಡಿ ಕ್ಯಾಚ್ ಕೊಟ್ಟರು. ನಂತರ ಬಂದ ಕಾಲಿನ್ ಡೆ ಗ್ರಾನ್ಧೊಮ್ಮೆ 4 ರನ್‍ಗಳಿಗೆ ಔಟ್ ಆದರು. ನವದೀಪ್ ಸೈನ್ 2 ರನ್‍ಗಳೊಂದಿಗೆ ಪೆವಿಲಿಯನ್ ಸೇರಿದರು.

        ಕ್ರೀಸ್‍ಗೆ ಬಂದ ಯುಜ್ವೇಂದ್ರ ಚಹಲ್ 4ರನ್‍ಗಳೊಂದಿಗೆ ಔಟ್ ಆದರು. ಮುಂದೆ ಉಮೇಶ್ ಯಾದವ್ ಕ್ರೀಸ್‍ಗೆ ಇಳಿದು 1 ರನ್ ಪಡೆದು ಓಟ್ ಆದರು. ನಂತರ ಬಂದ ಮೊಹಮ್ಮದ್ ಸಿರಾಜ್ ಕ್ರೀಸ್‍ನಲ್ಲಿ ಉಳಿದರೂ ಪಾರ್ಥೀವ್ ಪಟೇಲ್ ಔಟ್ ಆಗಿದ್ದರಿಂದ ಯಾವುದೇ ಪ್ರಯೋಜನವಾಗಲಿಲ್ಲ. 4 ರನ್‍ಗಳು ಉಚಿತವಾಗಿ ಬಂದರೂ ಹೆಚ್ಚಿನ ರನ್ ಪೇರಿಸುವಲ್ಲಿ ಆರ್‍ಸಿಬಿ ತಂಡ ವಿಫಲವಾಯಿತು. ಕೊನೆಗೆ 17.1 ಓವರ್‍ಗೆ 10 ವಿಕೆಟ್‍ಗಳ ನಷ್ಟಕ್ಕೆ 70ರನ್‍ಗಳನ್ನು ಮಾತ್ರ ನೀಡಿದ್ದರು.

      ಆರ್‍ಸಿಬಿಯ 71ರನ್‍ಗಳ ಗುರಿಯನ್ನು ಬೆನ್ನತ್ತಿದ್ದ ಚೆನ್ನೈ ತಂಡದಲ್ಲಿ ಮೊದಲು ಬ್ಯಾಟಿಂಗ್‍ಗೆ ಬಂದ ಶೈನ್ ವಾಟ್ಸನ್ ಮತ್ತು ಅಂಬಂಟಿ ರಾಯುಡು ನಿಧಾನಗತಿಯಲ್ಲಿ ಆಟವನ್ನು ಮುಂದುವರೆಸಿದರು. 3ನೇ ಆರಂಭದಲ್ಲಿ ಶೈನ್ ವಾಟ್ಸನ್ ಯಾವುದೇ ರನ್ ಪೇರಿಸದೆ ಔಟ್ ಆದರು. ನಂತರ ಬಂದ ಸುರೇಶ್‍ರೈನ 10ನೇ ಓವರ್ ವೇಳೆಗೆ 19ರನ್‍ಗಳನ್ನು ಪಡೆದು ಔಟ್ ಆದರು. ನಂತರ ಬಂದ ಕೇದಾರ್ ಜಾದವ್ ಅಂಬಂಟಿರಾಯುಡುಯೊಂದಿಗೆ ಉತ್ತಮ ಆಟ ಪ್ರದರ್ಶಿಸುತ್ತಿರುವಾಗ 28ರನ್‍ಗಳೊಂದಿಗೆ ಅಂಬಂಟಿ ರಾಯುಡು ಔಟ್ ಆದರು. ನಂತರ ಜಾದವ್‍ಗೆ ಜೊತೆಗಾರನಾಗಿ ರವೀಂದ್ರಜಡೇಜ ಕ್ರೀಸ್‍ಗೆ ಇಳಿದು ತಂಡವನ್ನು ಗೆಲುವಿನತ್ತ ಸಾಗಿಸತೊಡಗಿದರು.

     ಸಿಎಸ್‍ಕೆ ತಂಡ: ಅಂಬಾಟಿ ರಾಯುಡು, ಶೇನ್ ವ್ಯಾಟ್ಸನ್, ಸುರೇಶ್ ರೈನಾ, ಎಂಎಸ್ ಧೋನಿ (ಕೆ ಸಿ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್.

      ಆರ್‍ಸಿಬಿ ತಂಡ: ಪಾರ್ಥಿವ್ ಪಟೇಲ್ (ವಿ), ವಿರಾಟ್ ಕೊಹ್ಲಿ (ಸಿ), ಮೊಯೆನ್ ಅಲಿ, ಎಬಿ ಡಿ ವಿಲಿಯರ್ಸ್, ಶಿಮ್ರಾನ್ ಹೆಟ್ಮರ್, ಶಿವಮ್ ದುಬೆ, ಕೋಲಿನ್ ಡಿ ಗ್ರಾಂಡ್‍ಹೋಮ್, ಉಮೇಶ್ ಯಾದವ್, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link