ಭಾರತೀಯ ಜಲ ಗಡಿ ಪ್ರವೇಶಿಸಿದ ಚೀನಾ ಸಂಶೋಧನಾ ಹಡಗು..!

ಪೋರ್ಟ್ ಬ್ಲೇರ್:

   ಶತ್ರು ದೇಶದ ಮೇಲೆ ಕಾನೂನು ಬದ್ದವಾಗಿ ಬೇಹುಗಾರಿಕೆಗೆ ಅವಕಾಶವಿಲ್ಲ ಆದರೆ ಒಂದು ದೇಶದ ಮೇಲೆ ಇನ್ನೊಂದು ದೇಶ ಬೇಹುಗಾರಿಕೆ ನಡೆಸುವುದು ಸಾಮಾನ್ಯ ಆದರೆ ಬಹಿರಂಗವಾಗಿ ಬೇರೆ ದೇಶದ ಗಡಿಯಲ್ಲಿ ಅನುಮತಿ ಇಲ್ಲದೆ ನುಸುಳುವ ಪ್ರಯತ್ನ ಮಾಡುದವುದು ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ತಪ್ಪು ಇಂತಹುದರ ಮಧ್ಯ ಮಹತ್ವದ ಬೆಳವಣಿಗೆಯೊಂದರಲ್ಲಿ ಪೋರ್ಟ್ ಬ್ಲೇರ್  ಬಳಿಯ ಸಮುದ್ರದಲ್ಲಿ  ಶಂಕಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಚೈನಾದ ಹಡಗೊಂದನ್ನು ಭಾರತೀಯ ನೌಕಾ ಪಡೆ ಅಟ್ಟಾಡಿಸಿ ಓಡಿಸಿದ ಪ್ರಸಂಗ ವರದದಿಯಾಗಿದೆ.

   ಚೈನಾದ ಸಂಶೋಧನಾ ಹಡಗು ಶಿ- ಯಾನ್ 1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದ ಸಮುದ್ರದಲ್ಲಿ ಸಂಶೋಧನಾ ಕಾರ್ಯದಲ್ಲಿ ತೊಡಗಿರುವುದನ್ನು ಕಡಲು ಕಣ್ಗಾವಲು ವಿಮಾನದಿಂದ ಪತ್ತೆ ಹಚ್ಚಲಾಯಿತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.ಜಲ ಗಡಿ ಭಾಗ ಹಾಗೂ  ಆಗ್ನೇಯ ಏಷ್ಯಾ ವಲಯದಲ್ಲಿ ಕಣ್ಗಾವಲು ಇಟ್ಟಿರುವಂತೆ ಈ ಭಾಗದಲ್ಲಿನ ಭಾರತದ  ಚಟುವಟಿಕೆಗಳ ಮೇಲೆ ಕಣ್ಣಿಡಲು ಈ ಹಡಗನ್ನು ಚೈನಾ ಬಳಸುತಿತ್ತು ಎಂಬುದು  ತಿಳಿದುಬಂದಿದೆ. 

    ವಿಮಾನದಿಂದ ಪತ್ತೆ ಹಚ್ಚಿದ ನಂತರ ಈ ಹಡಗು ಭಾರತೀಯ ಎಕ್ಸ್ ಕ್ಲೂಸಿವ್  ಆರ್ಥಿಕ ವಲಯಕ್ಕೆ ಸಂಬಂಧಿಸಿದಂತೆ ಸಂಶೋಧನೆಯಲ್ಲಿ ತೊಡಗಿರುವುದು ಕಂಡುಬಂದಿದ್ದು, ನಂತರ ಅದನ್ನು ಭಾರತೀಯ ನೌಕಾ ಪಡೆ ಅಟ್ಟಾಡಸಿಕೊಂಡು ಹೋಗಿ ಓಡಿಸಿದ್ದಾರೆ.

    ಯಾವುದೇ ದೇಶದ ಎಕ್ಸ್ ಕ್ಲೂಸಿವ್  ಆರ್ಥಿಕ ವಲಯದಲ್ಲಿ ಸಂಶೋಧನೆ ನಡೆಸಲು ವಿದೇಶಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ . ಆದಾಗ್ಯೂ, ಈ  ಭಾಗದಲ್ಲಿ ಸಂಶೋಧನೆ ಏಕೆ ನಡೆಸಲಾಯಿತು ಎಂದು ಚೈನಾದ ಸಂಶೋಧನಾ ಹಡಗನ್ನು ಭಾರತೀಯ ನೌಕಾ ಪಡೆ ಪ್ರಶ್ನಿಸಿದೆ ಇದಕ್ಕೆ ಹಾರಿಕೆ ಉತ್ತರ ನೀಡಿದ ಕಾರಣ ಭಾರತ ನೌಕಪಡೆಯ ಎಚ್ಚರಿಕೆ ನೀಡಿ ನಂತರ ಶಿ-ಯಾನ್ 1 ಹಡುಗನ್ನು ಅಲ್ಲಿಂದ ವಾಪಾಸ್ ಕಳುಹಿಸಿದ್ದಾಗಿ ತಿಳಿದುಬಂದಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap