ಲಡಾಖ್ ನಲ್ಲಿ ಕಾರ್ಯಾಚರಣೆ ಆರಂಭಿಸಿದ ಚಿನೂಕ್

ನವದೆಹಲಿ:

    ಕಳೆದ ವರ್ಷ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ಚಿನೂಕ್ ಶ್ರೇಣಿಯ ಬಹುಸಾರ್ಮರ್ಥ್ಯದ  ಹೆಲಿಕಾಪ್ಟರ್      ಲಡಾಖ್ ವಲಯದ ಸಿಯಾಚಿನ್ ಹಿಮಚ್ಛಾದಿತ ಪ್ರದೇಶ ಸೇರಿದಂತೆ ಅತಿ ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ್ದು ಮಿಲಿಟರಿ ಸಾಧನಗಳನ್ನು ಎತ್ತರದ ಮಟ್ಟಕ್ಕೆ ಸಾಗಿಸುವ ಕೆಲಸ ಮಾಡುತ್ತಿದೆ ಎಂದು ತಿಳಿದು ಬಂದಿದೆ.

   ಚಿನೂಕ್ ಹೆಲಿಕಾಪ್ಟರ್ ನ್ನು ಅತಿ ಭಾರದ ಮಿಲಿಟರಿ ಉಪಕರಣಗಳನ್ನು ಪಾಕಿಸ್ತಾನ ಮತ್ತು ಚೀನಾ ಗಡಿ ಭಾಗದಲ್ಲಿ ಎತ್ತರದ ಪ್ರದೇಶಕ್ಕೆ ಕೊಂಡೊಯ್ಯಲು ಬಳಸಲಾಗುತ್ತದೆ. ಸಿಯಾಚಿನ್ ನಂತಹ ಅತಿ ಎತ್ತರ ಪ್ರದೇಶಗಳಲ್ಲಿ ಸೇವಾ ನಿರತರಾಗಿರುವ ಯೋಧರಿಗೆ ಈ ಮಿಲಿಟರಿ ಸಾಧನಗಳಿಂದ ನೆರವಾಗಲಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

  ಚಿನೂಕ್ ಅತಿ ಭಾರವನ್ನು ಹೊತ್ತೊಯ್ಯುವ, ಟಂಡೆಮ್ ರೋಟರ್ ಹೆಲಿಕಾಪ್ಟರ್ ಆಗಿದ್ದು, ಇದು 19 ದೇಶಗಳ ಸಶಸ್ತ್ರ ಪಡೆಗಳಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದೆ. ಕೇವಲ ಮಿಲಿಟರಿ ಸಾಧನಗಳನ್ನು ಒಯ್ಯುವುದು ಮಾತ್ರವಲ್ಲದೆ ಇನ್ನೂ ಅನೇಕ ಕಾರ್ಯಗಳನ್ನು ಮಾಡುತ್ತದೆ. ಭಾರತೀಯ ವಾಯುಪಡೆಗೆ ಹೆಚ್ ಎಆರ್ ಡಿ ಕೆಲಸಗಳಿಗೆ ಸಹ ಇದರಿಂದ ನೆರವಾಗಲಿದೆ ಎಂದು ವಾಯುಪಡೆ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap