ಕಸ ಮುಕ್ತ ನಗರಗಳ ಪಟ್ಟಿ ಬಿಡುಗಡೆ..!

ನವದೆಹಲಿ

    ರಾಷ್ಟ್ರಮಟ್ಟದ 5 ಸ್ಟಾರ್ ಗಾರ್ಬೇಜ್ ಫ್ರೀ’ ನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಂಬಿಕಾಪುರ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಹಿಂದಿನಿಂದಲೂ ‘ದೇಶದ ನಂ1ಸ್ವಚ್ಛನಗರಿ’ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಾಂಸ್ಕೃತಿಕ ನಗರ ಮೈಸೂರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಗಿದೆ.

     2 ನೇ ಸ್ಥಾನದಲ್ಲಿ ರಾಜಕೋಟ್, 3 ನೇ ಸ್ಥಾನ ದಲ್ಲಿ ಸೂರತ್ ನಗರ, ನಂತರದ ಸ್ಥಾನಗಳಲ್ಲಿ ಇಂಧೋರ್, ನವಿ ಮುಂಬೈ ನಗರಗಳು ಗಾರ್ಬೇಜ್ ಮುಕ್ತ ನಗರಗಳಾಗಿವೆ.ಇದಲ್ಲದೆ ಹರಿಯಾಣ, ನವದೆಹಲಿಯ ಕರ್ನಾಲ್, ಆಂಧ್ರ ಪ್ರದೇಶದ ತಿರುಪತಿ ಮತ್ತು ವಿಜಯವಾಡ, ಚಂಡೀಘಡ್, ಛತ್ತೀಸ್ ಘಡ್ ನ ಭಿಲಾಯ್ ನಗರ, ಗುಜರಾತ್‍ನ ಅಹಮದಾಬಾದ್ ಗೆ ಮೂರು ಸ್ಟಾರ್ ರೇಟಿಂಗ್ ದೊರೆತಿದೆ.

     ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಈ ಪಟ್ಟಿ ಯನ್ನು ಪ್ರಕಟಿಸಿದ್ದಾರೆ.ಇದೇ ವರ್ಷದ 2020-21ನೇ ಸಾಲಿನ ರಾಷ್ಟ್ರಮಟ್ಟದ 5 ಸ್ಟಾರ್ ಗಾರ್ಬೇಜ್ ಫ್ರೀ’ ಅಭಿಯಾನದಲ್ಲಿ ದೇಶದ 10 ನಗರಗಳು ಆಯ್ಕೆಯಾಗಿದ್ದವು.

     ಆಯ್ಕೆ ಯಾದ ನಗರಗಳ ಪೈಕಿ ಮೈಸೂರು ನಗರವೂ ಸ್ಥಾನ ಪಡೆದಿದ್ದು, ಮತ್ತೊಮ್ಮೆ ದೇಶದ ನಂಬರ್ 1 ಸ್ವಚ್ಛನಗರಿ ಮತ್ತು ಕಸ ಮುಕ್ತ ನಗರ ಎಂಬ ಪಟ್ಟ ಪಡೆಯುವ ಸಾಧ್ಯತೆಯಿದೆ ಎಂಬ ಬಲವಾದ ನಂಬಿಕೆ ಇತ್ತು.ಆದರೆ ಮೊದಲಿನ ಸ್ಥಾನ ಬಾರದೆ ನಾಲ್ಕನೇ ಸ್ಥಾನಕ್ಕೆ ತಲುಪಿದೆ. ಅಂಬಿಕಾಪುರಕ್ಕೆ ಮೊದಲ ಸ್ಥಾನ ದೊರಕಿದೆ.ಮೈಸೂರು ನಗರ ಪಾಲಿಕೆ ಪ್ರತಿನಿತ್ಯ ಕೇಂದ್ರ ಸರ್ಕಾರದ ಈ ಅಭಿಯಾನಕ್ಕೆ ಮಾಹಿತಿಗಳನ್ನು ಅಪ್‍ಲೋಡ್ ಮಾಡುತ್ತಿತ್ತು. ಇದಕ್ಕಾಗಿ ಒಂದು ವಿಶೇಷ ತಂಡವನ್ನು ಆಯೋಜಿಸಲಾಗಿತ್ತು.

     ಕಳೆದ ಮೂರು ತಿಂಗಳಿಂದ ಸಮೀಕ್ಷೆಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಕೇಂದ್ರದ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಲಾಗಿದೆ. ವಾಣಿಜ್ಯ ಸಂಕೀರ್ಣಗಳ ಬಳಿ ಎಲ್ಲಿಯೂ ಹೆಚ್ಚಾಗಿ ಕಸ ಕಾಣಿಸದಂತೆ ಮುನ್ನೆಚ್ಚರಿಕೆಯಾಗಿ ರಾತ್ರಿ ವೇಳೆ ಸ್ವಚ್ಛತಾ ಕಾರ್ಯ ನಡೆಸಲಾಗಿತ್ತು.ಈ ಎಲ್ಲ ಗಂಭೀರ ಪ್ರಯತ್ನಗಳ ನಡುವೆಯೂ ಮೈಸೂರು ನಗರ ಮೊದಲ ಸ್ಥಾನ ಪಡೆಯುವಲ್ಲಿ ಹಿನ್ನೆಡೆ ಸಾಧಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap