ವಿಧಾನ ಪರಿಷತ್ ಅನ್ನು ರದ್ದುಗೊಳಿಸಿದ ಸಿಎಂ..!

ಅಮರಾವತಿ

   ಆಂದ್ರ ಪ್ರದೇಶ ಸರ್ಕಾರ ವಿಧಾನಪರಿಷತ್‌ ಅನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರಕ್ಕೆ  ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪರಿಷತ್‌ನಲ್ಲಿ ಕಳೆದ ಎರಡು ದಿನ ನಡೆಯುತ್ತಿರುವ ಘಟನಾವಳಿಗಳ ಕುರಿತು ವಿಧಾನಸಭೆ ಯಲ್ಲಿ ಗುರುವಾರ ಚರ್ಚಿಸಲಾಗಿತ್ತು. ಪರಿಷತ್‌ ನ ಅಸ್ತಿತ್ವವನ್ನು ಮುಂದುವರಿಸುವ ಅಗತ್ಯತೆ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ  ಚರ್ಚೆ ನಡೆಸಲು ಅವಕಾಶ ನೀಡುವಂತೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸ್ಪೀಕರ್‌ಗೆ ಸೂಚಿಸಿದ್ದರು ಎನ್ನಲಾಗಿದೆ. 

ಈ ನಿರ್ಣಯ ಯಾಕೆ ?

    ಆಂಧ್ರಪ್ರದೇಶಕ್ಕೆ ಅಮರಾವತಿಯ ಜತೆಗೆ ವಿಶಾಖಪಟ್ಟಣ ಮತ್ತು ಕರ್ನೂಲ್‌ಗಳನ್ನೂ ರಾಜಧಾನಿಗಳನ್ನಾಗಿ ಮಾಡಿ ಒಟ್ಟು ಮೂರು ರಾಜಧಾನಿಗಳನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದರು. ಈ ನಿರ್ಧಾರಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿತ್ತು. ಆದರೆ ಇದಕ್ಕೆ ವಿಧಾನ ಪರಿಷತ್ ಅಡ್ಡಗಾಲು ಹಾಕಿತ್ತು. ಮೂರು ರಾಜಧಾನಿ ಮಸೂದೆಯನ್ನು ಪರಿಷತ್ ಅಧ್ಯಕ್ಷರು ತಮ್ಮ ವಿವೇಚನಾಧಿಕಾರ ಬಳಸಿಕೊಂಡು ಆಯ್ಕೆ ಸಮಿತಿಗೆ ವರ್ಗಾಯಿಸಲು ಶಿಫಾರಸು ಮಾಡಿದ್ದರು. ಇದರ ವಿರುದ್ಧ ಸಿಡಿದೆದ್ದಿರುವ ಜಗನ್,ವಿಧಾನಪರಿಷತ್‌ ತೆಗೆದುಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap