ತೆಲಂಗಾಣ
ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಸುನಿಲ್ ಅನಾರೋಗ್ಯದ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನ ರಾತ್ರಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸುನಿಲ್ ಅವರನ್ನು ರಾತ್ರೋರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೈದರಾಬಾದ್ ನ ಗಚಿಬೌಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕುಟುಂಬದವರು ಜೊತೆಯಲ್ಲಿ ಇದ್ದಾರೆ.
ಸುನಿಲ್ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರಂತೆ ಇದರ ನಿವಾರಣೆಗೆ ಅತೀ ಹೆಚ್ಚು ಆಂಟಿ ಬಯೋಟಿಕ್ಸ್ ತೆಗೆದುಕೊಂಡ ಕಾರಣ ಶ್ವಾಸಕೋಶದ ಸೋಂಕು ಆಗಿದೆ ಎಂದು ಹೇಳಲಾಗಿದೆ. ಸಿನಿಮಾ ರಿಲೀಸ್ ಆಗುತ್ತಿರುವ ಕಾರಣ ಪ್ರಮೋಷನ್ ನಲ್ಲಿ ಭಾಗಿಯಾಗಬೇಕೆಂದು ಮತ್ತು ಮುಂದಿನ ಸಿನಿಮಾದ ಚಿತ್ರೀಕರಣ ಇರುವ ಕಾರಣ ಬೇಗ ಗುಣಮುಖರಾಗಬೇಕೆಂದು ಹೆಚ್ಚು ಆಂಟಿ ಬಯೋಟಿಕ್ಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/01/Sunil-Admitted-To-A-Hospita.gif)