ಕಾಂಗ್ರೆಸಿಗರು ಶತ ಮೂರ್ಖರು : ಕೆ ಸಿ ಆರ್

ಹೈದರಾಬಾದ್​:

         ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೂತನ ವಿಭಜಿತ  ಆಂಧ್ರದ ಮುಖ್ಯಮಂತ್ರಿಯಾದ ಚಂದ್ರಬಾಬು ನಾಯ್ಡು ದೇಶ ಕಂಡ  ಅತ್ಯಂತ ಕೊಳಕು ರಾಜಕಾರಣಿಯಾದರೆ, ಕಾಂಗ್ರೆಸಿಗರು ಶತ ಮೂರ್ಖರು ಎಂದು ಕೆ.ಚಂದ್ರಶೇಖರ ರಾವ್​ ಕುಟುಕಿದ್ದಾರೆ.

        ಪ್ರಗತಿ ಭವನದಲ್ಲಿ ನೆನ್ನೆ  ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಜೀವನದಲ್ಲೇ ಇಂಥ ಕೊಳಕು ರಾಜಕಾರಣಿಯನ್ನು ನಾನು ನೋಡಿಲ್ಲ ಎಂದು ಚಂದ್ರಬಾಬು ನಾಯ್ಡು ಅವರನ್ನು ಸಹಿಸಿಕೊಂಡಿರುವ ಆಂಧ್ರದ ಜನತೆಗೆ ನಾನು ಸಲ್ಯೂಟ್​ ಹೊಡೆಯುತ್ತೇನೆ. ನಾಯ್ಡು ಅವಕಾಶವಾದಿ ರಾಜಕಾರಣಿ. ಬೇಕಾದಾಗ ಬಳಸಿಕೊಂಡು ಬೇಡವಾದಾಗ ಎಸೆಯುವ ನಡೆಯಿಂದಲೇ ಅವರು ಖ್ಯಾತಿ ಗಳಿಸಿದ್ದಾರೆ ಎಂದು ಕಿಡಿಕಾರಿದರು.

       ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಕೈಜೋಡಿಸಿ ಅನುಕೂಲ ಮಾಡಿಕೊಳ್ಳವವರೆಗೂ ಮಾಡಿಕೊಂಡು ಇದೀಗ ಕಾಂಗ್ರೆಸ್​ನ ರಾಹುಲ್​ ಗಾಂಧಿ ಜತೆ ಕೈಜೋಡಿಸಿ ಜನತೆಗೆ ಅನ್ಯಾಯ ಮಾಡಿದ್ದಾರೆ.ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾಯ್ಡು ಹೀನಾಯ ಸೋಲು ಅನುಭವಿಸುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ ಎಂದು ತಿಳಿದು ಬಂದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap