ನಾಯಕರಿಗೆ ಟಿ ವಿ ಮತ್ತು ಮಾಧ್ಯಮ ಚರ್ಚೆಗಳಿಂದ ದೂರ ಇರಲು ಕಾಂಗ್ರೆಸ್ ಸೂಚನೆ…!!!

ನವದೆಹಲಿ:
      ಈ ಬಾರಿಯ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ಕಾಂಗ್ರೆಸ್ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿದೆ. ಕಾಂಗ್ರೆಸ್ ವಕ್ತಾರರು ಯಾವುದೇ ಇನ್ನು ಒಂದು ತಿಂಗಳ ಕಾಲ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸಬಾರದು ಎಂದು ಹೈಕಮಾಂಡ್ ನಿರ್ಧರಿಸಿದೆ. ಈ ಕುರಿತು ಕಾಂಗ್ರೆಸ್ ವಕ್ತಾರರು ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದಾರೆ.
      ಪಕ್ಷದ ಪ್ರತಿನಿಧಿಗಳು ಮತ್ತು ವಕ್ತಾರರನ್ನು ಟಿವಿ ಕಾರ್ಯಕ್ರಮಗಳು ಅಥವಾ ಚರ್ಚೆಗಳಲ್ಲಿ ಭಾಗವಹಿಸಲು ಆಹ್ವಾನಿಸದಂತೆ ಎಲ್ಲಾ ಸುದ್ದಿ ಮಾಧ್ಯಮಗಳಿಗೆ, ಸಂಪಾದಕರುಗಳಿಗೆ ಮನವಿ ಮಾಡಿದದ್ದೇವೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮುಖ್ಯಸ್ಥ ಮತ್ತು ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.
      2017ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀರಾಹುಲ್ ಗಾಂಧಿಯವರು ಲೋಕಸಭೆ ಚುನಾವಣೆಯಲ್ಲಿ ಪಕ್ಷ ತೊರಿದ  ಕಳಪೆ ಸಾಧನೆಯ ಹೊಣೆಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನಿಡುವ ಹಠಕ್ಕೆ ಬಿದ್ದಿದ್ದಾರೆ ರಾಹುಲ್ ಗಾಂಧಿ. ಆದರೆ ಕಾಂಗ್ರೆಸ್ ಕಾರ್ಯಕಾರಿಣಿ ರಾಹುಲ್ ಗಾಂಧಿಯವರ ರಾಜೀನಾಮೆಯನ್ನು ತಿರಸ್ಕರಿಸಿದೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಪಕ್ಷದ ಹಿರಿಯ ನಾಯಕರು ಮನವೊಲಿಕೆಯಲ್ಲಿ ನಿರತರಾಗಿದ್ದಾರೆ. ಈ ಬೆಳವಣಿಗೆ ಚಾಲ್ತಿಯಲ್ಲಿರುವ ಕಾರಣದಿಂದ ಕಾಂಗ್ರೆಸ್ ವಕ್ತಾರರಿಗೆ ಒಂದು ತಿಂಗಳುಗಳ ಕಾಲ ಮಾಧ್ಯಮದ ಮುಂದೆ ಬಾರದಂತೆ ಕಾಂಗ್ರೆಸ್ ಪಕ್ಷ ಸೂಚನೆ ನೀಡಿದೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link