ನವದೆಹಲಿ:
ತಿಹಾರ ಜೈಲಿನ 45 ವರ್ಷದ ಅಸಿಸ್ಟೆಂಟ್ ಸೂಪರಿಂಟೆಂಡ್ ಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.ಈ ಮೂಲಕ ತಿಹಾರ್ ಜೈಲಿನಲ್ಲಿ ಇದೇ ಮೊದಲ ಕೊರೋನಾ ಪ್ರಕರಣವಾಗಿದೆ.
ತಿಹಾರ್ ಜೈಲಿನ ವಸತಿ ಸಮುಚ್ಚಯದ ನಿವಾಸಿಯಾರುವ ಅಧಿಕಾರಿನ್ನು ಸೆಂಟ್ರಲ್ ಜೈಲ್ ಸಂಖ್ಯೆ 7 ಕ್ಕೆ ಪೋಸ್ಟಿಂಗ್ ಮಾಡಲಾಗಿತ್ತು. ಈ ಅಧಿಕಾರಿ ಶುಕ್ರವಾರ ಮನೆಗೆ ತೆರಳಲು ರಜೆ ಕೋರಿದ್ದರು. ಆ ವೇಳೆ ಅವರಿಗೆ ಯಾವುದೇ ಲಕ್ಷಣಗಳಿರಲಿಲ್ಲ, ಆದರೆ ತೆರಳುವ ಮುನ್ನ ಅವರಿಗೆ ಕರೊನೋ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಕಂಡು ಬಂದಿದೆ ಎಂದು ಕಾರಾಗೃಹ ಇಲಾಖೆಯ ಡಿಜಿಪಿ ಸಂದೀಪ್ ಗೋಯೆಲ್ ತಿಳಿಸಿದ್ದಾರೆ,