ಚೆನ್ನೈ: ಕೊರೋನಾ ವರದಿಗಾರರಿಗೆ ಕೊರೋನಾ ಸೋಂಕು..!

ಚೆನ್ನೈ:

     ಸಮಾಜದಲ್ಲಿ ನಡೆಯುವ ಸಂಗತಿಗಳನ್ನು ವಸ್ತುನಿಷ್ಠವಾಗಿ ಜನರಿಗೆ ತಮ್ಮ ಬರಹಗಳ ಮೂಲಕ ಮುಟ್ಟಿಸುವಂತಹ  ಪತ್ರಕರ್ತರಿಗೂ ಇದೀಗ ಕೊರೋನಾ ಸೋಂಕು ತಗುಲಿದ್ದು ತಮಿಳು ನಾಡಿನ ಚೆನ್ನೈಯಲ್ಲಿ 24-25 ವರ್ಷದ ಯುವ ಪತ್ರಕರ್ತರಿಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

      ಪಾಲಿಕೆ ವಿಷಯಗಳಿಗೆ ಸಂಬಂಧಿಸಿದಂತೆ ವರದಿ ಮಾಡುತ್ತಿದ್ದ ಪತ್ರಕರ್ತನನ್ನು ಇತ್ತೀಚೆಗೆ ಕೋವಿಡ್-19ಗೆ ಸಂಬಂಧಿಸಿದ ಸುದ್ದಿಗಳ ವರದಿ ಮಾಡಲು ನಿಯೋಜಿಸಲಾಗಿತ್ತು. ಇವರು ತಮಿಳು ದೈನಿಕ ಪತ್ರಿಕೆಯ ವರದಿಗಾರರಾಗಿದ್ದು ಚೆನ್ನೈ ಪಕ್ಕದ ಟ್ರಿಪ್ಲಿಕೇನ್ ಹತ್ತಿರ ವಾಸವಾಗಿದ್ದರೆಂದು ತಿಳಿದು ಬಂದಿದೆ.

     ಇತ್ತೀಚೆಗೆ ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿಗಳಿಗೆ ಮತ್ತು ಕೋವಿಡ್-19ಗೆ ಸಂಬಂಧಿಸಿದ ಸುದ್ದಿಗಳಿಗೆ ಸಂಬಂಧಪಟ್ಟ ಕಡೆ ಹೋಗಿ ಬರುತ್ತಿದ್ದರು. ಆದರೆ ಯಾವುದೇ ಕೊರೋನಾ ಸೋಂಕಿತ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿರುವುದು ತಿಳಿದುಬಂದಿಲ್ಲ ಎಂದು ಚೆನ್ನೈ ಮಹಾ ನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಟ್ರಿಪ್ಲಿಕೇನ್ ನಲ್ಲಿ ಇದೇ ಮೊದಲ ಕೊರೋನಾ ಪ್ರಕರಣವಾಗಿದೆ.

     ತಾವು ವರದಿ ಮಾಡುತ್ತಿದ್ದ ಸಮಯದಲ್ಲಿ ಈ ಪತ್ರಕರ್ತ ರಿಪೊನ್ ಕಟ್ಟಡಕ್ಕೆ ಆಗಾಗ ಹೋಗಿಬರುತ್ತಿದ್ದರು. ಕೊರೋನಾ ಸೋಂಕಿನ ಲಕ್ಷಣ ಬಂದ ಕೂಡಲೇ ಅವರಾಗಿಯೇ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    ಇದೀಗ ಅವರ ಸಂಪರ್ಕದಲ್ಲಿದ್ದ 50 ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸೋಂಕು ನಿವಾರಿಸುವ ಕೆಲಸವನ್ನು ಮಾಡಲಾಗುತ್ತಿದ್ದು ನಂತರ 50 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸುತ್ತೇವೆ .ನಂತರ ಇವರನ್ನು ಎಲ್ಲಿ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗುವುದು ಎಂದು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link