ದೆಹಲಿ ವಿಧಾನ ಸಭೆಗೂ ಕವಿದ ಕೊರೋನಾ ಕಾರ್ಮೋಡ ..!

ನವದೆಹಲಿ

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಆರ್ಭಟ ಮುಂದುವರೆದಿದ್ದು, ಇದೀಗ ದೆಹಲಿ ವಿಧಾನಸಭೆಗೂ ಸೋಂಕಿನ ಭೀತಿ ಒಕ್ಕರಿಸಿದ್ದು, ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳದೇ ವಾಪಸ್ ಆಗಿರುವ ಘಟನೆ ನಡೆದಿದೆ.

   ಉಪ ಮುಖ್ಯಮಂತ್ರಿ , ಆರ್ ಕೆಪುರಂ ಶಾಸಕರಾದ ಪರ್ಮಿಳಾ ಟೋಕಾ ಅವರಿಗೆ ಸೊಂಕು ಒಕ್ಕರಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮನೀಶ್ ಸಿಸೋಡಿಯಾ ಅವರು, ಅಲ್ಪ ಪ್ರಮಾಣದ ಜ್ವರ ಇದ್ದಿದ್ದರಿಂದ ನಾನು ಕೊವಿಡ್ ಪರೀಕ್ಷೆಗೊಳಪಟ್ಟಿದ್ದೆ.  ವರದಿ ಪಾಸಿಟಿವ್ ಬಂದಿದ್ದು, ನಾನು ಮನೆಯಲ್ಲೇ ಸೆಲ್ಫ್ ಐಸೋಲೇಷನ್ ನಲ್ಲಿದ್ದೇನೆ. ಪ್ರಸ್ತುತ ನನಗೆ ಜ್ವರ ಅಥವಾ ಇತರೆ ಸಮಸ್ಯೆಗಳಿಲ್ಲ. ಸಂಪೂರ್ಣವಾಗಿ ಚೇತರಿಸಿಕೊಂಡು ಶೀಘ್ರದಲ್ಲೇ ನನ್ನ ಸೇವೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

    ಅಂತೆಯೇ ದೆಹಲಿ ವಿಧಾನಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಆರ್ ಕೆಪುರಂ ಶಾಸಕರಾದ ಪರ್ಮಿಳಾ ಟೋಕಾ ಅವರು ನಿಯಮಾವಳಿಯಂತೆ ದೆಹಲಿ ವಿಧಾನಸಭೆ ಆವರಣದಲ್ಲೇ ಆಯೋಜಿಸಲಾಗಿದ್ದ ಆರ್ ಟಿ ಪಿಸಿಆರ್ ಟೆಸ್ಟ್ ಗೆ ಒಳಪಟ್ಟಿದ್ದರು. ಅವರ ವರದಿ ಕೂಡ ಪಾಸಿಟಿವ್ ಬಂದ ಕಾರಣ ಅವರು  ಅಧಿವೇಶನದಲ್ಲಿ ಪಾಲ್ಗೊಳ್ಳದೇ ವಾಪಸ್ ತೆರಳಿದ್ದಾರೆ. ಅಲ್ಲದೆ ತಮ್ಮ ಸಂಪರ್ಕಕ್ಕೆ ಬಂದವರೂ ಕೂಡ ಪರೀಕ್ಷೆಗೊಳಪಡುವಂತೆ ಸೂಚನೆ ನೀಡಿದ್ದಾರೆ.
 
   ಈ ಹಿಂದೆ ಇದೇ ದೆಹಲಿ ವಿಧಾನಸಭೆಯ 4 ಶಾಸಕರು ಕೂಡ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸೋಮವಾರದ ವಿಶೇಷ ಅಧಿವೇಶನಕ್ಕೂ ಮುನ್ನ ರ್ಯಾಪಿಡ್ ಆ್ಯಂಟಿ ಜೆನ್ ಪರೀಕ್ಷೆಗೆ ಒಳಪಟ್ಟಿದ್ದ ಇಬ್ಬರು ಶಾಸಕರ ವರದಿ ನೆಗೆಟಿವ್ ಬಂದಿತ್ತು. ಆದರೆ ಬಳಿಕ  ನಡೆದ ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ಶಾಸಕರಿಗೆ ಸೋಂಕು ದೃಢವಾಗಿತ್ತು. ಹೀಗಾಗಿ ಅಧಿವೇಶನವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಶಾಸಕರು ಮನೆಗೆ ತೆರಳಿದರು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link