JNU ಹಿಂಸಾಚಾರ : ಸಂಚು ರೂಪಿಸಿದ್ದ ವಿದ್ಯಾರ್ಥಿಗಳ ಮೊಬೈಲ್ ವಶಕ್ಕೆ ಕೋರ್ಟ್ ಸೂಚನೆ

ನವದೆಹಲಿ:

     ಜೆಎನ್’ಯು ದಾಳಿಗೆ ಸಂಚು ರೂಪಿಸಿದ್ದ 2 ವಾಟ್ಸ್ ಆ್ಯಪ್ ಗ್ರೂಪ್ ಸದಸ್ಯಗಳ ಫೋನ್ ಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ. 

     ವಿಶ್ವವಿದ್ಯಾಲಯದ ಆವರಣದಲ್ಲಿ ಜನವರಿ 5 ರಂದು ನಡೆದ ಹಿಂಸಾಚಾರದ ಹಿಂದೆ 2 ವಾಟ್ಸ್ ಆ್ಯಪ್ ಗುಂಪುಗಳ ಸದಸ್ಯರುಗಳ ಕೈವಾಡವಿದ್ದು ,ಈ 2 ಗುಂಪಿನ ಸದಸ್ಯರ ಫೋನ್ ಗಳನ್ನು ವಶಕ್ಕೆ ಪಡೆದುಕೊಳ್ಳುವಂತೆ ಪೊಲೀಸರಿಗೆ ನ್ಯಾಯಾಧೀಶ ಬ್ರಿಜೇಶ್ ಸೇಥಿಯವರು ಸೂಚಿಸಿದ್ದಾರೆ. 

     ವಾಟ್ಸ್ ಆ್ಯಪ್ ತಾನು ಸಂದೇಶಗಳನ್ನು ಸರ್ವರ್ ಗಳಲ್ಲಿ ಇಟ್ಟುಕೊಂಡಿರುವುದಿಲ್ಲ. ಆದರೆ, ಬಳಕೆದಾರರ ಫೋನ್ ಗಳಿಂದ ಸಂದೇಶಗಳನ್ನು ಪುನಃ ಪಡೆದುಕೊಳ್ಳಬಹುದು ಎಂದು ಹೇಳಿದ ಬಳಿಕ ನ್ಯಾಯಾಲಯ ಈ ಆದೇಶವನ್ನು ನೀಡಿದೆ.ಅಲ್ಲದೆ, ಪೊಲೀಸರು ಕೇಳಿರುವ ಹಿಂಸಾಚಾರ ಸಿಸಿಟಿವಿ ದೃಶ್ಯಾವಳಿಗಳನ್ನು ಶೀಘ್ರಗತಿಯಲ್ಲಿ ನೀಡುವಂತೆ ಜೆಎನ್’ಯು ಆಡಳಿತ ಮಂಡಳಿಗ ತಿಳಿಸಿದೆ. 

   ಹಿಂಸಾಚಾರ ಸಂಬಂಧ ಜೆಎನ್’ಯು ಪ್ರಾಧ್ಯಾಪಕರಾದ ಅಮೀತ್ ಪರಮೇಶ್ವರನ್, ಅತುಲ್ ಸೂದ್, ಶುಕ್ಲಾ ವಿನಾಯಕ್ ಸಾವಂತ್ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link