ಕೇರಳ:
ದೇಶದ ಪ್ರತಿಷ್ಠಿತ ತಿರುವನಂತಪುರಂ ವಿಮಾನ ನಿಲ್ದಾಣ ಸೇರಿದಂತೆ ನಾಲ್ಕು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ಅದಾನಿ ಎಂಟರ್ಪ್ರೈಸಸ್ ಹೇಗೆ ಬಿಡ್ ಅನ್ನು ಗೆದ್ದಿದೆ ಎಂದು ಹಿರಿಯ ಸಿಪಿಐಎಂ ನಾಯಕ ಕೊಡಿಯಾರಿ ಬಾಲಕೃಷ್ಣನ್ ಅವರು ಪ್ರಶ್ನಿಸಿದ್ದಾರಲ್ಲದೇ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.
ಕೇರಳ ರಾಜ್ಯ ಕಾರ್ಯದರ್ಶಿಯಾದ ಬಾಲಕೃಷ್ಣನ್ ಅವರು ಅದಾನಿಯವರು ಐದು ವಿಮಾನ ನಿಲ್ದಾಣಗಳ ನಿರ್ವಹಣಾ ಬಿಡ್ ಗೆಲ್ಲಲು ಹೇಗೆ ಸಾಧ್ಯ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
“ಇದು ಟೆಂಡರು ಮೂಲಕ ನೀಡಲ್ಪಟ್ಟಿದೆ ಮತ್ತು ಇದು ಟೆಂಡರಿಂಗ್ ಪ್ರಕ್ರಿಯೆಯ ದೋಷ ಪೂರಿತವಾಗಿದೆ ಎಂದು ಸಂಶಯ ಬರುತ್ತಿದೆ ಮತ್ತು ಅದು ಹೇಗೆ ಅದಾನಿ ಎಲ್ಲ ಐದರಲ್ಲೂ ಜಯ ಸಾಧಿಸಿದ್ದಾರೆ ಎಂಬ ಸಂಪೂರ್ಣ ವರದಿಯನ್ನು ಜನತೆಯ ಮುಂದಿರಿಸಲು ನಾವು ಆಗ್ರಹಿಸುತ್ತೇವೆ.
“ನಾವು ಪ್ರತಿಭಟನೆ ನಡೆಸಬೇಕೆಂದು ನಿರ್ಧರಿಸಿದ್ದೇವೆ ಮತ್ತು ಅದರಲ್ಲಿ ಯುಡಿಎಫ್ ಮತ್ತು ಬಿಜೆಪಿ ಕೂಡ ಸೇರಲು ನಾವು ವಿನಂತಿಸುತ್ತೇವೆ”, ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ನಡೆದಿರುವ ದೇಶದ ಅತಿ ದೊಡ್ಡ ಹಗರಣ ಇದಾಗಿದ್ದು ಇದರ ಸಂಪೂರ್ಣ ತನಿಖೆಗೆ ಆಗ್ರಹಿಸುತ್ತೇವೆ ಏಂದು ತಿಳಿಸಿದ್ದಾರೆ.