ಅಮೆರಿಕ -ಇರಾನ್ ಸಂಘರ್ಷದಿಂದ ಕಚ್ಚಾ ತೈಲ ಬೆಲೆ ಏರಿಕೆ

ನವದೆಹಲಿ

  ಕೆಲದಿನಗಳಿಂದ ತಾರಕಕ್ಕೇರಿರುವ ಯುಎಸ್ ಹಾಗೂ ಇರಾನ್ ಸಂಘರ್ಷ ಬೇರೆ ಅಭಿವೃಧಿಶೀಲ ರಾಷ್ಟ್ರಗಳ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರತೊಡಗಿದೆ ಅದು ಹೇಗೆ ಎಂದರೆ ಕಚಾತೈಲದ ಬೆಲೆ ಏರಿಕೆಯಾಗುವ ಮೂಲಕ ತೈಲ ಆಮದು ಮಾಡಿಕೊಳ್ಳುವ ರಾಷ್ಟಗಳು ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಂಗೆಟ್ಟಿವೆ .

    ಈ ರಾಷ್ಟ್ರಗಳ ಪೈಕಿ ಪ್ರಮುಖ ರಾಷ್ಟ್ರವಾದ ಭಾರತದಲ್ಲಿ ಇಂದು ಇಂಧನ ಬೆಲೆ ಹೆಚ್ಚಳವಾಗಿದೆ. ಕಳೆದ ಐದು ದಿನಗಳಿಂದ ಸತತವಾಗಿ ತೈಲ ಬೆಲೆ ಏರಿಕೆಯಾಗುತ್ತಲೇ ಇದ್ದು ಗ್ರಾಹಕರು ಪೆಟ್ರೋಲ್ ಹಾಗು ಡೀಸಲ್ ಕೊಳ್ಳುವಾಗ ತೀವ್ರ ತೊಂದರೆ ಪಡುತ್ತಿದ್ದಾರೆ.

   ಈ ಹಠಾತ್ ವಿದ್ಯಮಾನದಿಂದ ಸೆನ್ಸೆಕ್ಸ್ ಕುಸಿತ ಕಂಡಿದೆ . ಇದೇ ವೇಳೆ, ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 72 ರೂ ಗಡಿ ದಾಟಿ ಹೋಗಿದೆ. ಒಂದು ಡಾಲರ್​ಗೆ 72.03 ರೂಪಾಯಿ ಆಗಿದೆ.

   ಬ್ರೆಂಟ್ ಕಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 70 ಯುಎಸ್ ಡಾಲರ್ ನಷ್ಟಿದೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಒಂದು ಲೀಟರ್ ಪೆಟ್ರೋಲ್ ಬೆಲೆ 78.28 ರೂ ಇದೆ. ಡೀಸೆಲ್ ಬೆಲೆ 70.27ರು ಪ್ರತಿ ಲೀಟರ್ ನಷ್ಟಿದೆ.ಇನ್ನು ತುಮಕೂರಿನ ಪರಿಸ್ಥಿತಿ ಭಿನ್ನವಾಗೆನೂ ಇಲ್ಲಾ , ತುಮಕೂರಿನಲ್ಲಿ ಒಂದು ಲಿಟರ್ ಪೆಟ್ರೋಲ್ ಗೆ 78.26ರೂ ಇದ್ದರೆ ಡೀಸಲ್ 70.86ರೂ ಇದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ