ಮತ್ತೆ ಹಾರಿದ ಡಕೋಟಾ

ನವದೆಹಲಿ

         ಡಕೋಟಾ ವಿಮಾನ ಎಂದಾಕ್ಷಣ ನೆನಪಿಗೆ ಬರುವುದು ನಮ್ಮ ಸ್ನೇಹಿತರು ಮಾಡುವ ಹಾಸ್ಯ ಆದರೆ ವಿಷಯ ಬೇರೆನೆ ಇದೆ,  1947ರಲ್ಲಿ ಪಾಕ್ ನೊಂದಿಗೆ ನಡೆದ ಯುದ್ಧದಲ್ಲಿ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಉಳಿಯುವಂತೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿಸಿ-3 ಡಕೋಟಾ ವಿಮಾನ ಇಂದು ಮತ್ತೆ ಹಾರಾಟ ನಡೆಸಿದೆ. ಸೋಮವಾರ ನವದೆಹಲಿಯಲ್ಲಿ ನಡೆದ ವಾಯುಪಡೆ ದಿನಾಚರಣೆ ವೇಳೆ ಇದು ತಾನು ಹಾರಾಟವನ್ನು ನಡೆಸಲು ಸಿದ್ಧ ಎಂದು ಮತ್ತೆ ಋಜುವಾತು ಮಾಡಿದೆ.

       ಹಾರಾಟಕ್ಕೆ ಅಸಮರ್ಥವಾಗಿದೆ ಎಂದು ಗುಜರಿ ಸೇರಿದ್ದ ವಿಮಾನ ಬ್ರಿಟನ್ ನಲ್ಲಿ ಇರುವುದನ್ನು ಕರ್ನಾಟಕದ ಸಂಸದ ರಾಜೀವ್ ಚಂದ್ರಶೇಖರ್ ಅವರು 2011ರಲ್ಲಿ ಪತ್ತೆ ಮಾಡಿದ್ದರು . ಆ ಗುಜರಿ ವಿಮಾನವನ್ನು ಮತ್ತೆ ತನ್ನ ಹಿಂದಿನ ಛಾತಿಗೆ ತಂದು ಅದನ್ನು ವಾಯುಪಡೆಗೆ  ಉಡುಗೊರೆಯಾಗಿ  ಕೊಟ್ಟದ್ದಾರೆ ಸಂಸದ ರಾಜೀವ್ ಚಂದ್ರಶೇಖರ್ ಅವರು ಮುಂದುವರೆದು ಹೇಳುವಂತೆ ಅವರ ತಂದೆ ವಾಯುಪಡೆಯಲ್ಲಿ ಕೆಲಸ ಮಾಡುವಾಗ ಈ ವಿಮಾನ ಹಾರಿಸಿದ್ದರಂತೆ ,ಅವರ ತಂದೆಯಾದ ಏರ್ ಕಮಾಂಡರ್  ಎಂಕೆ ಚಂದ್ರಶೇಖರ್ ಅವರ ಪರವಾಗಿ ಕಳೆದ ಫೆಬ್ರುವರಿಯಲ್ಲಿ ವಾಯುಪಡೆಗೆ ಕಾಣಿಕೆಯಾಗಿ ನೀಡಿದ್ದರು. ಈ ನಡುವೆ ದುರಸ್ತಿಗೊಂಡ ಈ ವಿಮಾನವು ಕಳೆದ ಏಪ್ರಿಲ್ 25ರಂದು ಭಾರತಕ್ಕೆ ಆಗಮಿಸಿತ್ತು. ಇದಕ್ಕೆ ಪರಶುರಾಮ ಎಂದು ಹೆಸರಿಡಲಾಗಿದೆ ಎಂದು ವಾಯುಪಡೆಯ ಮೂಲಗಳು ತಿಳಿಸಿವೆ .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ