ಮುಂಬೈ:
ದೇಶದಲ್ಲಿ ಕೊರೋನಾ ವೈರಸ್ ದಾಳಿಗೆ ಈಗಾಗಲೆ ಲಕ್ಷಾಂತರ ಜನ ಸೋಂಕಿತರಾಗಿದ್ದು ಈ ಒಟ್ಟು ಜನ ಸೋಂಕಿತರಲ್ಲಿ ಹೆಚ್ಚಿನವರು ಮಹಾರಾಷ್ಟ್ರಕ್ಕೆ ಸೇರಿರುವುದು ಗಮನಾರ್ಹವಾಗಿದೆ.
ಕೊರೋನಾ ವೈರಸ್ ಗೆ ಭಾರತದಲ್ಲಿ ಈ ವರೆಗೂ 3,163 ಮಂದಿ ಸೋಂಕಿತರ ಬಲಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 134 ಸೋಂಕಿತರು ಸಾವನ್ನಪ್ಪಿದ್ದಾರೆ. ಅಂತೆಯೇ 4,970 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವು ಸಂಭವಿಸಿದೆ. ಕೊರೋನಾ ಸಾವುಗಳ ರಾಜ್ಯಾವಾರು ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ.
ಒಟ್ಟಾರೆಯಾಗಿ ದೇಶದಲ್ಲಿ ಸಂಭವಿಸಿರುವ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ 3,163ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಮಹಾರಾಷ್ಟ್ರವೊಂದರಲ್ಲೇ ಬರೊಬ್ಬರಿ1,249 ಸೋಂಕಿತರು ಸಾವನ್ನಪ್ಪಿದ್ದಾರೆ. ಗುಜರಾತ್ ನಲ್ಲಿ ಈ ಸಂಖ್ಯೆ 694ಕ್ಕೇರಿದೆ. ಮಧ್ಯ ಪ್ರದೇಶದಲ್ಲಿ 252, ಪಶ್ಚಿಮ ಬಂಗಾಳದಲ್ಲಿ 244, ದೆಹಲಿ 168, ರಾಜಸ್ಥಾನದಲ್ಲಿ 138, ಉತ್ತರ ಪ್ರದೇಶದಲ್ಲಿ 118, ತಮಿಳುನಾಡಿನಲ್ಲಿ 81, ಆಂಧ್ರ ಪ್ರದೇಶದಲ್ಲಿ 50 ಸಾವು ಸಂಭವಿಸಿದೆ. ಇನ್ನು ಕರ್ನಾಟಕದಲ್ಲಿ 37 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಪಂಜಾಬ್ ಮತ್ತು ತೆಲಂಗಾಣದಲ್ಲಿ 35, ಜಮ್ಮು ಮತ್ತು ಕಾಶ್ಮೀರದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಹರ್ಯಾಣದಲ್ಲಿ 14, ಬಿಹಾರದಲ್ಲಿ 9, ಕೇರಳ ಮತ್ತು ಒಡಿಶಾದಲ್ಲಿ ತಲಾ 4 ಸಾವು ಸಂಭವಿಸಿದೆ.
ಜಾರ್ಖಂಡ್, ಚಂಡೀಘಡ, ಹಿಮಾಚಲ ಪ್ರದೇಶದಲ್ಲಿ ತಲಾ ಮೂರು ಸಂಭವಿಸಿದೆ. ಅಸ್ಸಾಂನಲ್ಲಿ 2, ಮೇಘಾಲಯಸ, ಉತ್ತರಾಖಂಡ, ಪುದುಚೇರಿಯಲ್ಲಿ ತಲಾ 1 ಸಾವು ಸಂಭವಿಸಿದೆ.
