ಪ.ಬಂಗಾಳ :
ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ದ ಇದ್ದ ಹೋರಾಟದ ಕಾವು ಸ್ವಲ್ಪ ಕಡಿಮೆಯಾಗುತ್ತಿದೆ ಇತ್ತ ಕಾಂಗ್ರೆಸ್ ಪಕ್ಷ ಆರಂಭದಲ್ಲಿ ತೋರಿದ ಉತ್ಸುಕತೆ ಈಗ ತೋರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.ಎಲ್ಲಾ ವಿರೋಧ ಪಕ್ಷಗಳು ಒಂದಾಗಿ, ಈ ಮಸೂದೆಯ ವಿರುದ್ದ ಹೋರಾಡಬೇಕು ಎನ್ನುವ ನಿಲುವಿನಲ್ಲಿ ಬಿರುಕು ಮೂಡಿದಂತೆ ಕಾಣುತ್ತಿದೆ. ಇದಕ್ಕೆ ಕಾರಣ, ಪಶ್ಚಿಮ ಬಂಗಾಳದ ಫೈರ್ ಬ್ರಾಂಡ್ ಸಿಎಂ ಮಮತಾ ಬ್ಯಾನರ್ಜಿ ನೀಡಿದ ಒಂದು ಹೇಳಿಕೆ ಈ ಅನುಮಾನ ಮೂಡಿಸಿದೆ.
ವಿವಿಧ ಸಂಘಟನೆಗಳು ಕರೆನೀಡಿದ್ದ ಭಾರತ್ ಬಂದ್ ವಿಚಾರದಲ್ಲೂ ಕಾಂಗ್ರೆಸ್ ಮತ್ತು ಎಡಪಕ್ಷಗಳ ಧೋರಣೆ ವಿರುದ್ದ ಕೆಂಡಾಮಂಡಲರಾಗಿದ್ದ ಮಮತಾ ಈಗ, ಪೌರತ್ವ ತಿದ್ದುಪಡಿ ಮಸೂದೆ ವಿಚಾರದ ಹೋರಾಟದಲ್ಲಯೂ ನನ್ನ ದಾರಿ ನನಗೆ ಎಂದಿದ್ದಾರೆ.ಭಾರತ್ ಬಂದ್ ವೇಳೆ ನಡೆದ ಹಿಂಸಾಚಾರಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಕೈವಾಡವಿದೆ ಎಂದು ದೂರಿದ್ದಾರೆ.
ಸಿಎಎ ಹೋರಾಟದಲ್ಲಿ ವಿರೋಧ ಪಕ್ಷಗಳೆಲ್ಲಾ ಒಗ್ಗಟ್ಟಿನ ಮಂತ್ರ ಜಪಿಸಲು ನಿರ್ಧರಿಸಿದ ಯುಪಿಎ ಮೈತ್ರಿಕೂಟ ಮತ್ತು ಎಡಪಕ್ಷಗಳ ಹಿರಿಯ ಮುಖಂಡರಿಂದ ದೀದಿ ಅಂತರ ಕಾಯ್ದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ