ನವದೆಹಲಿ
ರಾಜಧಾನಿಯಲ್ಲಿ ಬಿಸಿಲ ಝಳ ಹೆಚ್ಚಗಿದ್ದು ಜನಸಾಮಾನ್ಯರು ತೀವ್ರ ತೊಂದರೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ ಸಾಮಾನ್ಯವಾಗಿ ದೆಹಲಿಯಲ್ಲಿ ಇರುವ ವಾತಾವರಣಕ್ಕಿಂತ ನಾಲ್ಕು ಡಿಗ್ರಿ ಏರಿಕೆಯಾಗಿರುವುದರಿಂದ ತಾಪಮಾನವು 39.6 ಡಿಗ್ರಿ ಸೆಲ್ಷಿಯಸ್ ಗೆ ಏರಿಕೆಯಾಗಿದೆ. ಸಂಜೆ ವೇಳೆಗೆ ಆರ್ದ್ರತೆ ಪ್ರಮಾಣ ಶೇ 45 ರಷ್ಟಿತ್ತು. ಕನಿಷ್ಠ ತಾಪಮಾನ 31.3 ಡಿಗ್ರಿ ಸೆಲ್ಷಿಯಸ್ ಇದ್ದು, ಸಾಮನ್ಯಕ್ಕಿಂತ ನಾಲ್ಕು ಡಿಗ್ರಿ ಹೆಚ್ಚಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.