ವಿಜಯವಾಡ : ಕುಸಿದ ಬೆಟ್ಟ : ಮಣ್ಣಿನಡಿಯಲ್ಲಿ ಹಲವು ಭಕ್ತರು..!

ಆಂಧ್ರಪ್ರದೇಶ :

   ವಿಜಯವಾಡದ ಪ್ರಸಿದ್ಧ ಕನಕ ದುರ್ಗಾ ದೇವಾಲಯದ ಬಳಿ, ಬೆಟ್ಟಕುಸಿತ ಸಂಭವಿಸಿದೆ. ಇದರಿಂದಾಗಿ ಮಣ್ಣಿನಡಿಯಲ್ಲಿ ಹಲವು ಭಕ್ತರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

    ಆಂಧ್ರಪ್ರದೇಶದ ವಿಜಯವಾಡದ ಬಳಿಯಿರುವಂತ ಕನಕ ದುರ್ಗಾ ದೇವಾಲದಯ ಶೆಟ್ ಮೇಲೆ ಸಮೀಪದ ಬೆಟ್ಟ ಕುಸಿತಗೊಂಡು ದೊಡ್ಡ ಬಂಟೆಗಳು ಉರುಳಿ ಬಿದ್ದ ಪರಿಣಾಮ, ಅನೇಕ ಭಕ್ತರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.

   ಆಂಧ್ರಪ್ರದೇಶದ ವಿಜಯವಾಡದ ಬೆಟ್ಟದ ದೇಗುಲಕ್ಕೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಭೇಟಿ ನೀಡುವ ಕೆಲವೇ ಗಂಟೆಗಳ ಮುನ್ನ ಈ ಘಟನೆ ನಡೆದಿದೆ.

   ಗುಡಿಯಲ್ಲಿ 10 ದಿನಗಳ ದಸರಾ ಮಹೋತ್ಸವದ ಸಂಭ್ರಮ ಅಕ್ಟೋಬರ್ 17ರಿಂದ ಆರಂಭವಾಗಿದೆ. ಶ್ರೀ ದುರ್ಗಾಮಲ್ಲೇಶ್ವರ ಸ್ವಾಮಿ ವರ್ಲಾ ದೇವಸ್ಥಾನಂ (ಎಸ್ ಡಿಎಂಎಸ್ ಡಿ) ಎಂದೂ ಕರೆಯಲ್ಪಡುವ ಈ ದೇವಾಲಯವು ಕೋವಿಡ್-19 ಶಿಷ್ಟಾಚಾರಗಳ ನಡುವೆ ಭಕ್ತರಿಗೆ ತನ್ನ ಬಾಗಿಲನ್ನು ತೆರೆಯಿತು.

  ಪ್ರತಿ ಗಂಟೆಗೆ 1,000 ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಾಥಮಿಕ ವರದಿಗಳನ್ನು ಉಲ್ಲೇಖಿಸಿದೆ. ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ವಿಜಯವಾಡದ ಇಂದ್ರ ಕೀಲಾದ್ರಿ ಬೆಟ್ಟದ ಮೇಲಿರುವ ದೇವಾಲಯದಲ್ಲಿ ದೇವರಿಗೆ ‘ಪಟ್ಟೆ ವಸ್ತ್ರ’ ಅರ್ಪಿಸಲು ಆಗಮಿಸಲಿದ್ದರು, ಮೂಲಾ ನಕ್ಷತ್ರ ಎಂದು ಕರೆಯಲ್ಪಡುವ ಈ ದಿನದಂದು ಈ ದೇವಿಯನ್ನು ಶ್ರೀ ಸರಸ್ವತಿ ದೇವಿ ಎಂದು ಪೂಜಿಸಲಾಗುತ್ತದೆ. ಆದ್ರೇ ಇಂತಹ ದಿನದಂದೇ ಬೆಟ್ಟ ಕುಸಿತಗೊಂಡು, ಭಕ್ತರು ಬೆಟ್ಟದ ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap