ಹೃದಯಾಘಾತದಿಂದ ಗೋವಾ ಡಿಜಿಪಿ ಸಾವು

ಪಣಜಿ:

    ದೆಹಲಿಗೆ ಭೇಟಿ ನೀಡಿದ್ದ ಗೋವಾ ಪೊಲೀಸ್ ಮಹಾ ನಿರ್ದೇಶಕ ಪ್ರಣಬ್ ನಂದಾ ಅವರು ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. 

    ಐಪಿಎಸ್ ಅಧಿಕಾರಿ ಪ್ರಣಬ್ ನಂದಾ ಅವರು, ಅರುಣಾಚಲ ಪ್ರದೇಶ, ಮಿಜೋರಾಂ ಹಾಗೂ ಇತರೆ ಕೇಂದ್ರಾಡಳಿತ ಕೇಡರ್’ಗೆ ಸೇರಿದ್ದವರಾಗಿದ್ದಾರೆ.ಮಾರ್ಚ್ ತಿಂಗಳಿನಲ್ಲಿ ಗೋವಾ ಪೊಲೀಸ್ ಮಾಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು.ಪ್ರಣಬ್ ನಂದಾ ಅವರ ಪತ್ನಿ ಕೂಡ ಪಾಂಡಿಚೆರಿಯಲ್ಲಿ ಪೊಲೀಸ್ ಮಹಾ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

    ಪ್ರಣಬ್ ನಂದಾ ಅವರ ಅಕಾಲಿಕ ಮರಣಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಮೋದ್ ಸಾವಂತ್ ಅವರು, ಪ್ರಣಬ್ ನಂದಾ ಅವರ ಸಾವು ಅತೀವ ಬೇಸರವನ್ನು ಉಂಟುಮಾಡಿದೆ. ಅವರ ಕುಟುಂಬಕ್ಕೆ ಸಂತಾಪವನ್ನು ಸೂಚಿಸುತ್ತೇನೆಂದು. ನೋವು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap