ಹೊಸದಿಲ್ಲಿ :
ಇತ್ತೀಚೆಗೆ ‘ಭೋಬಿಶೋಟರ್ ಭೂತ್’ ಎಂಬ ಚಿತ್ರದ ಮೇಲೆ ನಿಷೇಧ ಹೇರಿದ ಕಾರಣಕ್ಕೆ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ 20 ಲಕ್ಷ ರೂ. ದಂಡ ವಿಧಿಸಿದೆ.
ಕೋರ್ಟ್ ನ ಆದೇಶದ ಅನ್ವಯ ಸರ್ಕಾರವು ಚಿತ್ರದ ನಿರ್ಮಾಪಕರಿಗೆ 20 ಲಕ್ಷ ರೂ. ಪರಿಹಾರ ನೀಡಬೇಕು ಎಂದು ನ್ಯಾ. ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವೂ, ಚಿತ್ರದ ಮೇಲೆ ನಿಷೇಧ ಹೇರುವ ಮೂಲಕ ಪ.ಬಂಗಾಳ ಸರ್ಕಾರ ಅವರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.
ಇದಕ್ಕೆ ಮೊದಲು ಮಾರ್ಚ್ 15ರಂದು ಸುಪ್ರೀಂ ಕೋರ್ಟ್ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಚಿತ್ರದ ಪ್ರದರ್ಶನಕ್ಕೆ ಯಾವುದೇ ತಡೆ ಅಥವಾ ನಿರ್ಬಂಧ ಒಡ್ಡಬಾರದು ಎಂದು ಆದೇಶಿಸಿತ್ತು. ಆದರೂ ಪಶ್ಚಿಮ ಬಂಗಾಲ ಸರಕಾರ ಅದಕ್ಕೆ ಡೋಂಟ್ ಕೇರ್ ಎಂಬ ರೀತಿಯಲ್ಲಿ ವರ್ತಿಸಿತ್ತು ಆದ್ದರಿಂದ ಕೋರ್ಟ್ ಈ ನೂತನ ಆದೇಶ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ