ಶಾಸಕರ ಅನರ್ಹತೆ: ಶೀಘ್ರ ವಿಚಾರಣೆಗೆ ಸುಪ್ರೀಂ ಕೋರ್ಟ್ ಗೆ ಡಿಎಂಕೆ ಒತ್ತಾಯ ..!!

ಹೊಸದಿಲ್ಲಿ

    2017ರಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ಎಡಪ್ಪಾಡಿ ಪಳನಿಸ್ವಾಮಿ ಅವರ ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಅಡ್ಡಮತದಾನದ ಆರೋಪದ ಮೇಲೆ 11 ಎಐಎಡಿಎಂಕೆ ಶಾಸಕರನ್ನು ಅನರ್ಹಗೊಳಿಸಬೇಕೆಂಬ ತನ್ನ ಮನವಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕೆಂದು ಡಿಎಂಕೆ ಇಂದು ಮಂಗಳವಾರ ಸುಪ್ರಿಂ ಕೋರ್ಟನ್ನು ಒತ್ತಾಯಿಸಿತು.

     ಇದಕ್ಕೆ ಉತ್ತರವಾಗಿ ವರಿಷ್ಠ ನಾಯ್ಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠವು ಉಪ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಸಹಿತ ಶಾಸಕರ ಅನರ್ಹತೆಯನ್ನು ಕೋರಿರುವ ಡಿಎಂಕೆ ಮನವಿಯನ್ನು ತುರ್ತು ವಿಚಾರಣೆ ಪಟ್ಟಿಗೆ ಸೇರಿಸುವಂತೆ ಸೂಚಿಸುವುದಾಗಿ ಹೇಳಿತು.

     ಪನ್ನೀರಸೆಲ್ವಂ ಮತ್ತು ಇತರ 10 ಶಾಸಕರು ಅಂದು ಬಂಡುಕೋರ ಬಣದ್ಲಿದ್ದರು. 2017ರ ಫೆ.18ರ ವಿಶ್ವಾಸಮತ ಗೊತ್ತುವಳಿಯಲ್ಲಿ ಇವರು ಪಳನಿಸ್ವಾಮಿ ವಿರುದ್ಧ ವಿಶ್ವಾಸ ಮತ ಹಾಕಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap