ಕೊರೋನಾ ಅವಧಿಯಲ್ಲಿ ಆದ ಬ್ಯಾಂಕ್ ವಂಚನೆಯಾದರು ಎಷ್ಟು ಗೊತ್ತೇ..?

ನವದೆಹಲಿ:

     ಕೋರೊನಾದಿಂದಾಗಿ ಆರ್ಥಿಕ ಕುಸಿತ ಕಂಡು ಬರುತ್ತಿರುವುದರ ಬೆನ್ನಲ್ಲೇ ಬ್ಯಾಂಕ್  ವಂಚನೆ ಪ್ರಕರಣಗಳು ಕೂಡ ಹೆಚ್ಚಾಗಿದೆ ಎಂದು ಆರ್ ಬಿ ಐ ವರದಿ ನೀಡಿದೆ.

    ಒಂದು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣದ ಸುಮಾರು 8 ಸಾವಿರದ 707 ವಂಚನೆ ಪ್ರಕರಣಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ವರದಿಯಾಗಿದೆ ಎಂದು ಆರ್ ಬಿಐ ವಾರ್ಷಿಕ ವರದಿ ಹೇಳಿದೆ. ಮೌಲ್ಯದ ವಿಚಾರ ಬಂದಾಗ ಅದು 1.85 ಲಕ್ಷ ಕೋಟಿಯಾಗುತ್ತದೆ, ಅಂದರೆ ಕಳೆದ ವರ್ಷಕ್ಕಿಂತ ಶೇಕಡಾ 159ರಷ್ಟು ಹೆಚ್ಚಾಗಿದೆ.

    ಸಾರ್ವಜನಿಕ ವಲಯ ಬ್ಯಾಂಕ್ ಗಳಲ್ಲಿ ಶೇಕಡಾ 98ರಷ್ಟು ವಂಚನೆ ಪ್ರಕರಣಗಳು ನಡೆದಿದ್ದು ನಂತರ ಖಾಸಗಿ ವಲಯ ಬ್ಯಾಂಕುಗಳಲ್ಲಿ ಶೇಕಡಾ 18.4ರಷ್ಟಾಗಿವೆ. ಸಾಲಗಳಲ್ಲಿ ಶೇಕಡಾ 98.1ರಷ್ಟು ಅಂದರೆ ಒಟ್ಟು ವಂಚನೆ 1.82 ಲಕ್ಷ ಕೋಟಿ ರೂಪಾಯಿ, ನಂತರ ಕ್ರೆಡಿಟ್, ಡೆಬಿಟ್ ಕಾರ್ಡುಗಳಲ್ಲಿ, ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಪ್ರತಿವರ್ಷ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುತ್ತದೆ. ವರ್ಷದ ಹಿಂದೆ 71 ಕೋಟಿ(1,866 ಕೇಸುಗಳು) ವರದಿಯಾಗಿವೆ ಎಂದು ಆರ್ ಬಿಐ ಅಂಕಿಅಂಶ ಹೇಳುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap