ಮೀರತ್
ನಿರ್ಭಯಾ ಅತ್ಯಾಚಾರ ಪ್ರಕರಣದ 4ಜನ ಅಪರಾಧಿಗಳನ್ನು ಗಲ್ಲಿಗೇರಿಸಲು ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್ ಟಡೆಯುತ್ತಿರುವ ಸಂಭಾವನೆ ಮೊತ್ತ ಬಹಿರಂಗವಾಗಿದ್ದು ನಾಲ್ಕು ಜನರನ್ನು ಗಲ್ಲಿಗೇರಿಸಲು ಅವರಿಗೆ ಬರೋಬ್ಬರಿ 1 ಲಕ್ಷ ಸಂಭಾವನೆ ಪಡೆಯಲಿದ್ದಾರೆ.
ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಒಬ್ಬರಿಗೆ ತಲಾ 25000 ನಂತೆ ಒಟ್ಟಾರೆ 1,00,000 ಸಿಗಲಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
ಪವನ್ ಅವರು ಹಳುವ ಪ್ರಕಾರ ಕುಣಿಕೆ ಮತ್ತು ನೇಣಿಗೇರಿಸುವ ಸ್ಥಳ ಪರಿಶೀಲಿಸಬೇಕು. ಅಪರಾಧಿಗಳ ದೇಹದ ಆರೋಗ್ಯ ಮತ್ತು ಅಳತೆಗಳನ್ನು ನೋಡಬೇಕು ಅದಕ್ಕೆ ತಕ್ಕಂತೆ ಹಗ್ಗದ ದಪ್ಪ ಮತ್ತು ಎತ್ತರವನ್ನು ನೋಡಿಕೊಳ್ಳತ್ತೇನೆ ತಿಹಾರ್ ಜೈಲಿನ ಅಧಿಕಾರಿಗಳಿಂದ ಸೂಚನೆ ಬಂದ ತಕ್ಷಣ ಅಲ್ಲಿಗೆ ತೆರಳುತ್ತೇನೆ ಎಂದು ಕ್ರಮವನ್ನು ವಿವರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
