ದೆಹಲಿಯಲ್ಲಿ 2.1 ತೀವ್ರತೆಯ ಭೂಕಂಪನ…!

ನವದೆಹಲಿ

       ದೆಹಲಿಯಲ್ಲಿ ಮತ್ತೆ ಲಘು ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆ ದಾಖಲಾಗಿದೆ.
ದೆಹಲಿಯಿಂದ 13 ಕಿ.ಮೀ ದೂರದ ಗುರುಗ್ರಾಮ ಗಡಿಯಲ್ಲಿ ಭೂಕಂಪದ ಕೇಂದ್ರಬಿಂದುವಿದೆ. ಹಾಗೆಯೇ 18 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

      ಏಪ್ರಿಲ್‌ನಿಂದ ಜೂನ್‌ವರೆಗೆ ದೆಹಲಿ-ಎನ್‌ಸಿಆರ್‌ನಲ್ಲಿ 14 ಬಾರಿ ಭೂಕಂಪ ಸಂಭವಿಸಿದೆ.ಜೂನ್ 3 ರಂದು ಕೂಡ ದೆಹಲಿಯ ಸುತ್ತಮುತ್ತಲ ಪ್ರದೇಶದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿತ್ತು.ಮೇ 29 ರಂದು ರಾತ್ರಿ 9.08 ಕ್ಕೆ ಪೂರ್ವ ಹರಿಯಾಣ ಮತ್ತು ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್) ಕೆಲವು ಭಾಗಗಳನ್ನು ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯ ಭೂಕಂಪ ದಾಖಲಾಗಿತ್ತು.

      ಭೂಕಂಪದ ಕೇಂದ್ರಬಿಂದು ಹರಿಯಾಣದ ರೋಹ್ಟಕ್ ಮತ್ತು ಆಳ 3.3 ಕಿ.ಮೀನಷ್ಟಿತ್ತು. ಕಳೆದ ಒಂದು ತಿಂಗಳಲ್ಲಿ ದೆಹಲಿ ಮತ್ತು ಹತ್ತಿರದ ಪ್ರದೇಶಗಳು ಕನಿಷ್ಠ 6-7 ಭೂಕಂಪಗಳನ್ನು ಅನುಭವಿಸಿವೆ, ಕರೋನವೈರಸ್ COVID-19 ಸಾಂಕ್ರಾಮಿಕ ರೋಗದಿಂದ ಈಗಾಗಲೇ ತೊಂದರೆಗಳನ್ನು ಎದುರಿಸುತ್ತಿರುವ ಜನರಿಗೆ ಉದ್ವಿಗ್ನತೆ ಹೆಚ್ಚುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap