ಮುಂಬೈ:
25000 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಲ ದಿನಗಳ ಹಿಂದೆಯಷ್ಟೆ ಇಡಿಯಿಂದ ಸಮನ್ಸ್ ಪಡೆದಿದ್ದ ಎನ್ ಸಿ ಪಿ ಮುಖಂಡ ಶರದ್ ಪವಾರ್ ಗೆ ಕೊಂಚ ರಿಲೀಫ್ ಸಿಕ್ಕಿದಂತಾಗಿದೆ .
ಇಡಿ ಸಮನ್ಸ್ ಗೆ ಎದೆಗುಂದದೆ ನಾನನೆ ಹೋಗಿ ಇಡಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ ಪವಾರ್ ಗೆ ಇಡಿ ಸದ್ಯದ ಮಟ್ಟಿಗೆ ನಿಮ್ಮ ವಿಚಾರಣೆಯನ್ನು ಮುಂದೂಡಲಾಗಿದೆ ಮುಂದಿನ ದಿನಾಂಕದ ವಿವರಗಳನ್ನು ನಿಮಗೆ ಫೋನಿನ ಮೂಲಕ ತಿಳಿಸುತ್ತೇವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ನನಗೆ ವಿಚಾರಣೆಯ ಭಯವಿಲ್ಲ ನಾನು ಹುಟ್ಟು ಧೈರ್ಯಶಾಲಿ ಎಂದು ಧೈರ್ಯವಾಗಿ ಹೇಳಿದ್ದ ಪವಾರ್ ಇಡಿಯ ಆದೇಶ ಬರದೆ ಇದ್ದಿದ್ದರೆ ಇಂದು ಅಧಿಕಾರಿಗಳ ಮುಂದೆ ಹಾಜರಾಗಬೇಕಿತ್ತು.ಆದರೆ ಜಾರಿ ನಿರ್ದೇಶನಾಲಯ ಶರದ್ ಪವಾರ್ ಅವರಿಗೆ ಇಂದು ಬೇಡ ಎಂದು ತಿಳಿಸಿದೆ. ನಿಮ್ಮ ಸ್ಪಷ್ಟನೆ ಅಗತ್ಯವಿದ್ದರೆ ನಿಮಗೆ ಕರೆ ಮಾಡಿ ಕರೆಸಿಕೊಳ್ಳತ್ತೇವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
