ಬಿಜಾಪುರದಲ್ಲಿ ಎನ್ ಕೌಂಟರ್ ಐವರು ನಕ್ಸಲರ ಹತ್ಯೆ….!!!!

ರಾಯಘಡ: 

          ಛತ್ತೀಸ್ ಗಡದಲ್ಲಿ ನಕ್ಸಲ್ ದಾಳಿ  ಬೆದರಿಕೆ ನಡುವೆಯೂ ಮೊದಲ ಹಂತದ ಚುನಾವಣೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ  ಬಿಗಿ ಭದ್ರತೆಯಲ್ಲಿ ನಡೆಯಿತು.ಉಳಿದ 72 ಸ್ಥಾನಗಳಿಗೆ ನವೆಂಬರ್ 20ಕ್ಕೆ ನಡೆಯಲ್ಲಿದ್ದು ಇನ್ನುಳಿದಂತೆ ಉಳಿದ ನಾಲ್ಕು ರಾಜ್ಯಗಳಾದ  ಮಧ್ಯಪ್ರದೇಶ, ರಾಜಸ್ತಾನ, ತೆಲಂಗಾಣ, ಹಾಗೂ ಮಿಜೋರಾಂ ರಾಜ್ಯಗಳ ಚುನಾವಣೆ ಜೊತೆಯಲ್ಲಿ ಛತ್ತೀಸ್ ಗಡಕ್ಕೆ  ಎರಡನೇ ಹಂತದಲ್ಲಿ  ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

         ಈ ಎಲ್ಲಾ ಬೆಲವಣಿಗೆಗಳ ಮಧ್ಯೆ ಬಿಜಾಪುರ ಜಿಲ್ಲೆಯ ಪಮೇಡ್ ಬಳಿ ಭದ್ರತಾ ಪಡೆಗಳು ಹಾಗೂ ನಕ್ಸಲೀಯರ ನಡುವೆ ಗುಂಡಿನ ದಾಳಿ-ಪ್ರತಿದಾಲಿಗಳಲ್ಲಿ ಐವರು ನಕ್ಸಲರು ಹತರಾಗಿದ್ದಾರೆ ಮತ್ತು ನಕ್ಸಲ್ ನಿಗ್ರದಳದ ಕೊಬ್ರಾ ಪಡೆಯ ಮೂರಕ್ಕೂ ಹೆಚ್ಚು ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ಸದ್ಯ ಎಲ್ಲಾ ಸಿಬ್ಬಂದಿಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂಬುದು ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link