ಗೋವಾ:
ಭಾರೀ ಮಳೆಯ ಹಿನ್ನೆಲೆಯಲ್ಲಿ ಹದಗೆಡುತ್ತಿರುವ ರನ್ ವೇ ದುರಸ್ಥಿಗಾಗಿ ಗೋವಾ ದಬೊಲಿಮ್ ವಿಮಾನ ನಿಲ್ದಾಣವನ್ನು ನವೆಂಬರ್ 2 ರಿಂದ ಪ್ರತಿ ಶನಿವಾರ ಆರು ಗಂಟೆಗಳ ಕಾಲ ಮುಚ್ಚಲು ನೌಕಾಪಡೆ ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಬೋಲಿಮ್ ವಿಮಾನ ನಿಲ್ದಾಣವು ಐಎನ್ಎಸ್ ಹನ್ಸಾ ನೌಕಾ ವಾಯುನೆಲೆಯ ಭಾಗವಾಗಿದೆ ಮತ್ತು ಇದು ನಾಗರಿಕ ಸೌಲಭ್ಯಕ್ಕೂ ಲಭ್ಯವಿದೆ.
ವಿಮಾನ ನಿಲ್ದಾಣದ ನವೀಕರಣ ಕಾಮಗಾರಿಯಿಂದ ನಾಗರಿಕ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರದಂತೆ ಎಚ್ಚರ ವಹಿಸಲಾಗುವುದು ಮತ್ತು ಕಾಮಗಾರಿಗಳು ನೌಕಾಪಡೆಯ ನಿಗದಿಪಡಿಸಿದ ಸಮಯದಲ್ಲಿ ನಡೆಸಲ್ಪಡುತ್ತವೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ