ಬಿಲಾಸ್ಪುರ:
ಜೆಸಿಸಿ (ಜೆ) ಮುಖ್ಯಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿ ಅವರನ್ನು ರಾಜ್ಯದ ಬಿಲಾಸ್ಪುರ ಜಿಲ್ಲೆಯಲ್ಲಿ ಇಂದು ವಂಚನೆ ಮತ್ತು ಖೋಟಾ ಆರೋಪದ ಮೇಲೆ ಬಂಧಿಸಲಾಗಿದೆ.
2013 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಾರ್ವಾಹಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಮೀರಾ ಪೈಕ್ರಾ ಅವರು ಜೋಗಿಯವರ ವಿರುದ್ಧ ಪೊಲೀಸ್ ದೂರು ನೀಡಿದ ಹಿನ್ನೆಲೆಯಲ್ಲಿ ಈ ಬಂಧನ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಅಗ್ರವಾಲ್ ತಿಳಿಸಿದ್ದಾರೆ . 2013 ರ ರಾಜ್ಯ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಅಮಿತ್ ಜೋಗಿ ಅವರು ತಮ್ಮ ಜನ್ಮಸ್ಥಳದ ಬಗ್ಗೆ ತಪ್ಪು ಮಾಹಿತಿಯನ್ನು ಅಫಿಡವಿಟ್‌ನಲ್ಲಿ ಸಲ್ಲಿಸಿದ್ದಾರೆ ಎಂದು ಮಿಸ್ ಪೈಕ್ರಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಮಿಸ್ ಪೈಕ್ರಾ ಅವರು ಹೇಳುವ ಪ್ರಕಾರ ಜೋಗಿಯವರು ಅಮೇರಿಕದಲ್ಲಿ ಹುಟ್ಟಿದ್ದು ಅವರು ಚುನಾವಣೆ ಬಿಲಾಸ್ಪುರದ ಗೌರೆಲಾ ಪ್ರದೇಶದ ಸರ್ಬಹರಾ ಗ್ರಾಮ ಎಂದು ನಮೂದಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ
ಅಮಿತ್ ಜೋಗಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಮೀಸಲಾದ ಬಿಲಾಸ್ಪುರದ ಮಾರ್ವಾಹಿ ಸ್ಥಾನದಿಂದ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದರು ಮತ್ತು ಅವರ ಸ್ಪರ್ಧೆ ಅಸಂವಿಧಾನಿಕವಾಗಿದೆ ಎಂದು ಪೈಕ್ರಾ ಅವರ ದೂರಿನಲ್ಲಿ ತಿಳಿಸಿದ್ದರು.
ಸುಮಾರು ಆರು ತಿಂಗಳ ಕಾಲ ತನಿಖೆಯ ನಂತರ ಜೋಗಿಯವರನ್ನು ಬಂಧಿಸಲಾಗಿದೆ ಎಂದು ಶ್ರೀ ಅಗ್ರವಾಲ್ ಹೇಳಿದ್ದಾರೆ.ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ಮೋಸ), 467 (ಅಮೂಲ್ಯವಾದ ಭದ್ರತೆಯ ಖೋಟಾ), 468 (ಮೋಸ ಮಾಡುವ ಉದ್ದೇಶದಿಂದ ಖೋಟಾ) ಮತ್ತು 471 (ನಿಜವಾದ ಖೋಟಾ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯಾಗಿ ಬಳಸಲಾಗಿದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಅವರ ಪ್ರಕರಣಕ್ಕೆ ಸಂಬಂಧಪಟ್ಟ ಕೇಸಿನ ಸೆಕ್ಷನ್ ಗಳನ್ನು ವಿವರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ