ನವದೆಹಲಿ:
ಮಾಜಿ ವಿತ್ತ ಸಚಿವ ಹಾಗು ಬಿಜೆಪಿ ಪಕ್ಷದ ಪ್ರಭಾವಿ ನಾಯಕ ಶ್ರೀ ಟರುಣ್ ಜೇಟ್ಲಿ ಅವರು ಇಂದು ನಿಧನರಾಗಿದ್ದಾರೆ.
ಅವರು ಕಳೆದ 8 ದಿನಗಳಿಂದ ದೆಹಲಿಯ ಏಮ್ಸ್ನಲ್ಲಿ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಅನಾರೋಗ್ಯದ ಕಾರಣ ಅವರು ಕಳೆದ ಬಾರಿಯ ಚುನಾವಣೆಯಲ್ಲಿಯೂ ಸಹ ಸ್ಪರ್ಧಿಸಿರಲಿಲ್ಲ. ನಂತರದಲ್ಲಿ ಅವರು ಸರ್ಕಾರಕ್ಕೆ ಬಾಹ್ಯವಾಗಿಯೇ ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದರು.
Delhi: Former Union Minister and Senior BJP leader Arun Jaitley passes away at AIIMS. pic.twitter.com/pmr4xiyqYV
— ANI (@ANI) August 24, 2019
ಮುಂಚಿನಿಂದಲೂ ಸದಾ ಸ್ನೇಹ ಜೀವಿಯಾಗಿದ್ದ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ರಾಜಕೀಯದಲ್ಲಿ ಅಜಾತ ಶತ್ರುವಾಗಿದ್ದರು. ರಾಜಕೀಯವಾಗಿ ಜಿದ್ದಾಜಿದ್ದಿನಿಂದ ಹೋರಾಡಿದರೂ ಎಲ್ಲರೂ ಮಿತ್ರರಾಗಿದ್ದರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ