ನವದೆಹಲಿ
ಇಂಡಿಯನ್ ನ್ಯಾಷನಲ್ ಲೋಕದಳದ ಹರ್ಯಾಣ ಘಟಕದ ಮಾಜಿ ಅಧ್ಯಕ್ಷ ಮತ್ತು ಮಾಜಿ ಸಚಿವ ಅಶೋಕ್ ಅರೋರ ಭಾನುವಾರ ಕಾಂಗ್ರೆಸ್ ಸೇರ್ಪಡೆಯಾದರು.
ಅರೋರ ಅಲ್ಲದೆ, ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಶಾಸಕ ಜೈಪ್ರಕಾಶ್, ಐಎನ್‍ಎಲ್‍ಡಿ ಮಾಜಿ ನಾಯಕ ಮತ್ತು ಸಚಿವ ಸುಭಾಷ್ ಗೋಯಲ್, ಐಎನ್ಎಲ್‍ಡಿ ಮಾಜಿ ಶಾಸಕ ಪ್ರದೀಪ್ ಚೌದರಿ, ಮಾಜಿ ಸಚಿವ ದಿವಂಗತ ಜಸ್ವಿಂದರ್ ಸಿಂಗ್ ಸಂಧು ಅವರ ಪುತ್ರ ಗಗನ್‍ಜಿತ್ ಸಂಧು ಕೂಡ ಇದೇ ವೇಳೆ ಕಾಂಗ್ರೆಸ್ ಸೇರಿದರು.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬಿ ಆಜಾದ್, ಹರ್ಯಾಣ ಪಿಸಿಸಿ ಅಧ್ಯಕ್ಷ ಕುಮಾರಿ ಸೆಲ್ಜಾ ಮತ್ತು ಹರ್ಯಾಣ ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡ ಹಾಜರಿದ್ದರು.ಈ ವರ್ಷ ಹರ್ಯಾಣ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈ ಪಕ್ಷ ಸೇರ್ಪಡೆ ಕಾಂಗ್ರೆಸ್‍ಗೆ ಹೆಚ್ಚಿನ ಶಕ್ತಿ ನೀಡಲಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
