ತಮಿಳುನಾಡಿನಲ್ಲಿ ಪಟಾಕಿ ಸಿಡಿಸುವ ಸಮಯ ವಿಸ್ತರಣೆ

ನವದೆಹಲಿ: 
        ದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಪರಿಸರ ಮಾಲಿನ್ಯ ಆಗುತ್ತಿರುವುದನ್ನು ಪರಿಗಣಿಸಿ ಪಟಾಕಿ ಸಿಡಿಸಲು ಸಮಯವನ್ನು ನಿಗದಿ ಮಾಡಿದ್ದ ಸುಪ್ರೀಂಕೋರ್ಟ್ ಇದೀಗ ತಮಿಳುನಾಡು ಸರ್ಕಾರದ ಮನವಿಯನ್ನು ಪರಿಗಣಿಸಿ ರಾಜ್ಯದಲ್ಲಿ ಪಟಾಕಿ ಸಿಡುವ ಸಮಯವನ್ನು ವಿಸ್ತರಣೆ ಮಾಡಿದೆ. 
        ದೀಪಾವಳಿ ಸೇರಿ ಇತರೆ ಹಬ್ಬಗಳಂದು ಇಡೀ ದಿನ ಪಟಾಕಿ ಸಿಡಿಸುವ ಸ್ವಾತಂತ್ರ್ಯಕ್ಕೆ ಈ ಹಿಂದೆ ಕಡಿವಾಣ ಹಾಕಿದ್ದ ಸುಪ್ರೀಂಕೋರ್ಟ್, ಪಟಾಕಿ ಸಿಡಿತದಿಂದ ಭಾರೀ ಪರಿಸರ ಮಾಲಿನ್ಯ ಆಗುತ್ತಿರುವುದನ್ನು ಪರಿಗಣಿಸಿ, ಪಟಾಕಿ ನಿರ್ಬಂಧಿಸಿ ಕಡಿಮೆ ಮಾಲಿನ್ಯಕಾರಕವಾದ  ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿತ್ತು. ಇತರ ಹಬ್ಬಾಚರಣೆ ವೇಳೆ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಬೇಕೆಂದು ನಿಬಂಧನೆಯನ್ನೂ ವಿಧಿಸಿತ್ತು. 
       ತಮಿಳುನಾಡಿನ ಮನವಿಯನ್ನು ಪರಿಗಣಿಸಿರುವ ನ್ಯಾಯಾಲಯ ದೀಪಾವಳಿ ಹಬ್ಬದ ದಿನದಂದು 4.30ರಿಂದ 6.30ರವರೆಗೂ ಪಟಾಕಿ ಸಿಡಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ . 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap